ಜನಗಣಮನ

28/03/2010

ಕನ್ನಡಿಗರ ಹಕ್ಕು ಮತ್ತು ಆಂಗ್ಲ ಮಾಧ್ಯಮಗಳು

Filed under: ಕನ್ನಡ — ರಾಕೇಶ್ ಶೆಟ್ಟಿ @ 3:36 ಅಪರಾಹ್ನ

ಯಾವಾಗಲೋ ಒಂದ್ ಸರಿ ಬಂದ್ರೆ ಎಲ್ಲೋ ಅಪ್ಪಿ ತಪ್ಪಿ ಹೀಗ್ ಬರ್ದಿರ್ಬೇಕು ಅನ್ಕೊಬಹುದಿತ್ತೇನೋ,ಆದ್ರೆ ಒಬ್ಬರಾದ ಮೇಲೆ ಒಬ್ರು ಸರದಿಯಲ್ಲೇನೋ ಅನ್ನು ವಂತೆ ಈ ಆಂಗ್ಲ ಪತ್ರಿಕೆಗಳು ಕನ್ನಡಿಗರ ಹಕ್ಕು ಪ್ರತಿಪಾದನೆಯನ್ನ ಮಹಾಪರಾದವೇನೋ ಎಂಬಂತೆ ಚಿತ್ರಿಸಲು ಹೊರಟಿವೆಯೇ?

ಮೊನ್ನೆ ಮೊನ್ನೆ ತಾನೇ ಲೋಕಾಯುಕ್ತರ ವಿಷಯದಲ್ಲಿ,ಕನ್ನಡದಲ್ಲಿ ಮಾತಾಡಿ ಅಂತ ಕೇಳಿದ್ದನ್ನ ‘ಪ್ರಾದೇಶಿಕ ಸಂಕುಚಿತತೆ’ ಅನ್ನುವ ಶೀರ್ಷಿಕೆ ಕೊಟ್ಟು ಒಂದು ಆಂಗ್ಲ ಪತ್ರಿಕೆ ಬರೆದ್ರೆ,ಈಗ ಮತ್ತೊಂದು ಆಂಗ್ಲ ಪತ್ರಿಕೆಯ ಸರದಿ.

ಬೆಂಗಳೂರು ಮಹಾನಾಗರ ಪಾಲಿಕೆಯ ಚುನಾವಣೆಯ ಮತ ಯಂತ್ರದಲ್ಲಿ ‘ಕನ್ನಡ’ಬಳಸಿದ್ದನ್ನು ಅಕ್ಷೇಪಿಸಿರುವ ಲೋಕ ಸತ್ತಾ  ಪಕ್ಷದ ಕೆಲವರ ಮಾತುಗಳನ್ನ ಪ್ರಕಟಿಸಿರುವುದೇನೋ ಸರಿ.ಆದ್ರೆ ಅದಕ್ಕೆ ಇಂತ  ಕಿತ್ತೋಗಿರೋ ಶೀರ್ಷಿಕೆ ಯಾಕೆ?ಯಾರ ಮಧ್ಯೆ ಬೆಂಕಿ ಹಚ್ಚೋಕೆ ಹೊರಟಿದ್ದಾರೆ ಇವ್ರು?ಒಂದು ಊರಿಗೆ ಬಂದ ಮೇಲೆ ಅಲ್ಲಿನ ಜನರ ರೀತಿ,ರಿವಾಜುಗಳನ್ನ ಕಲಿತು ಅವರೊಂದಿಗೆ ಬೆರೆತು ಬದುಕಬೇಕಾಗಿರುವುದು ಹೊರಗಿನಿಂದ ಬಂದವರ ಕರ್ತವ್ಯ.ಅವರಿಗೋಸ್ಕರ ಈ ನೆಲೆದಲ್ಲೇ ಹುಟ್ಟಿ ಬೆಳೆದು ಬಂದವರು ನಮ್ಮ ಭಾಷೆನ ಬಿಟ್ಟು ಇಂಗ್ಲಿಷ್ ಕಲಿಬೇಕಾ?

ನಮ್ಮ್ ಕರ್ಮಕ್ಕೆ ಕೆಲ ಕನ್ನಡಿಗರು ಮನೆಗೆ ತರಿಸೋದು ಆಂಗ್ಲ ಪತ್ರಿಕೆಯನ್ನೇ.ಇನ್ನ ಅದ್ರಲ್ಲಿ ಇಂತ ವಿಷಯಗಳನ್ನ ಇಲ್ಲದ ರೂಪದಲ್ಲಿ ಪ್ರೆಸೆಂಟ್ ಮಾಡಿದ್ರೆ,ಅದನ್ನ ಓದಿದವರು ಹಾಗೆ ಅರ್ಥ ಮಾಡ್ಕೊತಾರೆ.ಆಮೇಲೆ ಈ ಕನ್ನಡ ಸಂಘಟನೆಗಳು ಜಾಸ್ತಿ ಆಡ್ತಾವೆ ಹಂಗೆ ಹಿಂಗೆ ಬಿಟ್ಟಿ ಮಾತುಗಳಿಗೇನು ಬರಾನ?

ನಮ್ಮ್  ಹಕ್ಕುಗಳನ್ನ ಕೊಡಿ ಸರ್ ಅಂದ್ರೆ ,ಅದು ಅಪ್ರಾಧವೇನೋ ಅನ್ನೋ ರೀತಿಲಿ ಚಿತ್ರಿಸುವುದ್ಯಾಕೆ?ಒಂದು ನೆಲದ ಆಚಾರ,ವಿಚಾರ,ಸಂಸ್ಕೃತಿ,ಭಾಷೆ ಇವುಗಳನ್ನ ಅರ್ಥ ಮಾಡಿಕೊಳ್ಳುವ ಮನಸ್ಥಿತಿ ನಮ್ಮ ಆಂಗ್ಲ ಪತ್ರಿಕೆಗಳಿಗೆ ಬರುವುದು ಯಾವಾಗ?

Advertisements

4 ಟಿಪ್ಪಣಿಗಳು »

 1. ಈ ಇಂಗ್ಲಿಷ್ ಪೇಪರ್ನವರಿಗೆ ಕನ್ನಡದ ಪರವಾಗಿ ಏನೇ ಇದ್ರು ಅದೆಲ್ಲ “ಸಂಕುಚಿತ” “ಪ್ರಾದೇಶಿಕ” ಅಂತಾನೇ ಅನ್ಸತ್ತೆ. ಇವರುಗಳು ಬದುಕಿರೋದೆ ಈ ರೀತಿ ಜನರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಿ, ಬೆಳೆಸೋದ್ರಿಂದ. ಇವರಿಗೆ ಬೆಂಗಳೂರಿನ ನಿಜವಾದ ನಾಗರೀಕತೆ ಬಗ್ಗೆಯಾಗ್ಲೀ, ಕನ್ನಡಿಗರಬಗ್ಗೆಯಾಗ್ಲೀ ಒಂದು ಚೂರೂ ಕಾಳಜಿ ಇಲ್ಲ.

  Comment by ಸಂಧ್ಯಾ — 28/03/2010 @ 4:25 ಅಪರಾಹ್ನ | ಉತ್ತರ

 2. ರಾಕೇಶಣ್ಣಾ.. ಆಂಗ್ಲ ಪತ್ರಿಕೆಗಳಿಗೆ ನಾವೇ ಅರ್ಥೈಸಬೇಕಷ್ಟೆ!!

  Comment by ದಿವ್ಯ — 02/04/2010 @ 4:23 ಫೂರ್ವಾಹ್ನ | ಉತ್ತರ

  • ಹೌದು ದಿವ್ಯ,
   ಇಂತ ವರದಿಗಳು ಬಂದಾಗ ಅವರಿಗೊಂದು ಮಿಂಚೆ ಕಳಿಸಿ ತಪರಾಕಿ ಹಾಕಬೇಕು.ಅದನ್ನ ಮಾಡುತಿದ್ದೇವೆ.

   Comment by rakeshsshetty — 03/04/2010 @ 4:27 ಫೂರ್ವಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Blog at WordPress.com.

%d bloggers like this: