ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!

ಇಷ್ಟೊತ್ತಿಗೆ ಊರಿನಲ್ಲಿ ಇದ್ದಿದ್ದರೆ ಎಲ್ಲರೊಂದಿಗೆ ಒಟ್ಟಿಗೆ ಊಟ ಮಾಡಿ,ಹರಟಿ ನಿದ್ದೆ ಹೋಗುತಿದ್ದೆ.ಈಗ ಬೆಂಗಳೂರಿನ ರೂಮಿನಲ್ಲಿ ಕಂಪ್ಯೂಟರ್ ಪರದೆಯ ಮುಂದೆ ಒಂಟಿಯಾಗಿ ಕುಳಿತವ, ಮುತ್ತಿನಂತ ೩ ದಿನದ ರಜೆಯನ್ನ ಹಾಳು ಮಾಡಿ ಊರಿಗೆ ಹೋಗದಂತೆ ತಡೆದ ಮ್ಯಾನೇಜರ್ಗೆ ಹಿಡಿ ಶಾಪ ಹಾಕಿ ಇದನ್ನ ಬರಿತಿದ್ದೀನಿ.

ಇವತ್ತ್ ಬೆಳಿಗ್ಗೆ ಮಲ್ಲೇಶ್ವರಮ್ಮಿನ ‘ಹಳ್ಳಿ ಮನೆ’ಯಲ್ಲಿ ‘ಮಂಗಳೂರು ಬನ್ಸ್-ಬಿಸಿ ಬಿಸಿ ಚಹಾ’ ಸ್ವಾಹ ಮಾಡಿದವನಿಗೆ ನೆನಪಾಗಿದ್ದು, ಮನೆಯಲ್ಲಿದ್ದಗಾ,ಅಮ್ಮ  ಏನೇ ತಿಂಡಿ ಮಾಡಿದ್ರು ‘ದಿನ ಏನ್ ತಿಂಡಿ ಅಂತ ಮಾಡ್ತಿರಮ್ಮ, ನೀವೇ ತಿನ್ಕೊಳ್ಳಿ ನಂಗ್ ಬೇಡ’ ಅಂತ ಕಮೆಂಟು ಹೊಡೆದು ಹೋಗ್ತಿದ್ದೆ.ಆದ್ರೆ ಈಗ ಬೆಂಗಳೂರಿನಲ್ಲಿ ಹೋಟೆಲ್ನವನಿಗೆನಾದ್ರು ಹಾಗೆ ಹೇಳಿದ್ರೆ ‘ಬೇಕಿದ್ರೆ ತಿನ್ನಪ್ಪ ಇಲ್ಲಾಂದ್ರೆ ಹೋಗು ‘ ಅಂತಾರೆ ಅಷ್ಟೇ 😉

ಆಗ ಅಮ್ಮ  ವೋಡ್ ರೊಟ್ಟಿ,ನೀರ್ ದೋಸೆ,ಬನ್ಸ್,ಗೆಂಡೆ ತಡ್ಯ,ಗೋಳಿ ಬಜೆ ಮಾಡಿದ್ರೆ ಮುಖ ಸಿಂಡರಿಸುತ್ತಿದೆ.ಈಗ ಹೊಟ್ಟೆ ಪಾಡಿಗೆ ಬೆಂಗಳೂರಿಗೆ ಬಂದ ಮೇಲೆ, ಅದೇ ಗೋಳಿ ಬಜೆ,ಬನ್ಸ್,ನೀರ್ ದೋಸೆ,ಕೋರಿ ರೊಟ್ಟಿಯನ್ನ   ಕಿಲೋಮೀಟರ್ಗಟ್ಟಲೆ ಹುಡುಕಿಕೊಂಡು ಹೋಗಿ ತಿಂದು ಬರ್ತೀನಿ.ತಿಂದ ಮೇಲೆ ಅಮ್ಮನ ಕೈರುಚಿ ಸಿಗುವುದಿಲ್ಲವಲ್ಲಾ 😦

ಮನಸಿನಲ್ಲೇ ಅನ್ಕೊಳ್ಳೋದು ‘ಮಗನೆ,ಮಾಡಿ ಕೊಡುವಾಗ ಧಿಮಾಕು,ಕಮೆಂಟು ಹೊಡಿತಿದ್ಯಲ್ಲ,ಹಿಂಗೆ ಆಗ್ಬೇಕು ಬಿಡು’ ಅಂತ.ಎಲ್ಲ ತಿಂಡಿಗಳಿಗಿಂತ ಹೆಚ್ಚಾಗಿ ನಾ ಮಿಸ್ ಮಾಡಿಕೊಳ್ತಾ ಇರೋದು ‘ಭೂತಾಯಿ ಮೀನಿನ ಸಾರು ಮತ್ತೆ ಫ್ರೈ’ 😉

ಹಾಂ! ಅಂದ ಹಾಗೆ ನೀವು ಮಂಗಳೂರು ಬನ್ಸ್ ತಿಂದಿಲ್ಲ ಅಂದ್ರೆ ಒಮ್ಮೆ ತಿಂದು ನೋಡಿ, ಜೊತೆಗೆ ಚಹಾದ ಕಾಂಬಿನೇಶನ್ ಇದ್ರೆ ಮಸ್ತ್!, ನೀವು ಸಸ್ಯಹಾರಿ ಅಲ್ಲವಾದರೆ ‘ಭೂ ತಾಯಿ ಮೀನಿನ ರುಚಿಯೂ ನೋಡಿ,ಹಾಂ! ಬೆಂಗಳೂರಿನಲ್ಲಿ ಭೂತಾಯಿಗೆ ‘ಮತ್ತಿ’ ಅಂತಾರೆ’

6 thoughts on “ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!

Add yours

  1. ಹ್ಹ.. ಹ್ಹ.. ರಾಕೇಶಣ್ಣ…
    ಚೆನ್ನಾಗಿ ಬರೆದಿದ್ದೀರ.. 🙂
    ನಂದೂ ಸೇಮ್ ಕೇಸ್… ಮನೆಯಲ್ಲಿದ್ದಾಗ, ದೀಸೆ ಇಡ್ಲಿ, ಪತ್ರೊಡೆ, ಎಲ್ಲ ಮಾಡಿದ್ರೆ.. ಎಲ್ಲದರಲ್ಲೂ ಕೊರತೆ ಹುಡ್ತಿದ್ದೆ..
    ಈ ಹಾಸ್ಟೆಲ್ ಸಹವಾಸದಿಂದ ಮನೆಗೆ ಫೋನಾಯಿಸಿ.. ಮನೆಗೆ ಬಂದಾಗ ಮಾಡ್ಕೊಡು ಅಂತ ಅದೇ ಹಿಂದಿನ ಮೆನು ಲಿಸ್ಟ್ ಹೇಳಿದ್ರೆ.. ಈಗ ಅದೆಲ್ಲ ಆಗುತ್ತಾ.. ಅಮ್ಮ ಈಗ ನಗ್ತಾರೆ..
    ಇಂದೆ ರಾಕೇಶಣ್ಣಾ “ಬಂಗುಡೆ”ಲ ಎಡ್ಡೆ ಆಪುಂಡುಗೆ.. ದಾಯೆ ಬುಡ್ತಿನೆ??

  2. it was good reading this article,,, i am also from native mangalore,,, nw in belgaum ,, in job,,, remembered my past, the same eatables in the morning,,, fed up with these work , no time to think of these golden moments ,,, thanks for that,, i recalled my old memories, the days which never comes ..

Leave a reply to Vasanth Kaje ಪ್ರತ್ಯುತ್ತರವನ್ನು ರದ್ದುಮಾಡಿ

Create a free website or blog at WordPress.com.

Up ↑