ನೀವು ಸ್ವರ್ಗಕ್ಕೆ ಹೋಗಬೇಕಾ? – ಹಾಗಿದ್ರೆ ……..!!!

(ಇದನ್ನ ನಾನು ಬರೆದಿದ್ದು ೨೦೦೯ರ ಏಪ್ರಿಲ್ ೬ ರಂದು.ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದ ಬಂದ್ ಎದೆಗ್ ಒದ್ರು ಅನ್ನೋ ಗಾದೆ ತರ ನನಗಾದ ಅನುಭವವನ್ನ ಬರೆದು ಕೊಂಡರೆ,ಇದು ‘ಕಿಡಿ ಹಚ್ಚುವಂತ’ ಲೇಖನ ಅಂತೇಳಿ ಇದನ್ನ ಎತ್ತಂಗಡಿ ಮಾಡಲಾಗಿತ್ತು! ಇವತ್ತು ಏನೋ ಹುಡುಕುವಾಗ ಮತ್ತೆ ಈ ಲೇಖನ ಸಿಕ್ಕಿತ್ತು.ಅದನ್ನ ಯಾವುದೇ ಬದಲಾವಣೆ ಮಾಡದೆ ಹಾಗೆ ಇಲ್ಲಿ ಪ್ರಕಟಿಸುತಿದ್ದೇನೆ)

ರಾಮನವಮಿಯ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿ ಕೋಸಂಬರಿ – ಪಾನಕ ಲೀಟರ್ಗಟ್ಟಲೆ ಸೇವಿಸಿ, ಸ್ವಲ್ಪ ಪಾರ್ಸಲ್ನೂ ತಗೊಂಡು ಹೊರಬರುವಷ್ಟರಲ್ಲಿ ‘ಕಾರ್ತಿಕ್’ ಫೋನ್ ಮಾಡಿ “MSR IT ” ಕಾಲೇಜ್ ಬಳಿ ಬರುವಂತೆ ಹೇಳಿದ, ಸರಿ ಅಂತ ಅತ್ತ ಹೊರತು ಅವನನ್ನು ಭೇಟಿಯಾಗಿ, ಹಾಗೆ ಪುಟ್ಪಾತ್ನಲ್ಲಿ ನಿಂತು ಮಾತಾಡುತಿದ್ದಂತೆ, ಒಬ್ಬ ೨೬ರ ಹರೆಯದ ಯುವಕ ಹಾಗು ಮತ್ತೊಬ್ಬ ಮಧ್ಯ ವಯಸ್ಕ ನಮ್ಮ ಬಳಿಬಂದರು, ಆ ಯುವಕ ನಮ್ಮಿಬ್ಬರ ಕೈಗೆ ಒಂದು ಕರಪತ್ರ ನೀಡಿ ” sir, u have some thing important in this” ಅಂದ, ನಾನೋ ಆ ಕರಪತ್ರದ ಮೊದಲ ಪುಟ ನೋಡುವ ಬದಲು ಅವಸರವಾಗಿ ೨-೩ ನೆ ಪುಟ ತೆಗೆದೆ, ಅದರಲ್ಲಿ ಜಾಗವೇ ಇಲ್ಲದಂತೆ ಪೂರ್ತಿ ಪುಟ ತುಂಬಿಸಿದ್ದರು, ನಾನು ಅವನತ್ತ ತಿರುಗಿ , ಏನ್ರಿ ಈಗ ನಾನು ಇದನೆಲ್ಲ ಓದಬೇಕಾ? ಅಂದೆ, ಅದಕ್ಕೆ ಆತ ಅದೆಲ್ಲ ಬೇಡ ಸರ್, ಮೊದಲ ಪುಟದಲ್ಲಿ ಒಂದು ಪ್ರಶ್ನೆಯಿದೆ ನೋಡಿ ಎಂದ.

ಆ ಪ್ರಶ್ನೆ “What does it take to get to Heaven?”

ಅವನು ನನ್ನತ್ತ ತಿರುಗಿ ಹೇಳಿ ಸರ್ ಹೇಗೆ ಸ್ವರ್ಗಕ್ಕೆ ಹೋಗಬಹುದು? ಅಂದ.
ನಾನು ತಲೆ ಕೆರೆದು ಕೊಂಡು ಹೇಳಿದೆ , “ಒಳ್ಳೆ ಕೆಲಸ ಮಾಡಿ , ಎಲ್ಲರಿಗೂ ಒಳ್ಳೆಯದನ್ನೇ ಹಾರೈಸಿ, ಇಷ್ಟು ಸಾಕು ಸೀದಾ ಅಲ್ಲಿಗೆ ಹೋಗ್ತಿರಾ”.

ಅವನು “ನೀವು ನಿಮ್ಮ ಜೀವನದಲ್ಲಿ ತಪ್ಪೇ ಮಾಡಿಲ್ಲವೇ” ಅಂದ ,ನಾನು “ಯಾಕ್ರೀ ನೀವ್ ಮಾಡಿಲ್ವಾ?” ಅಂದೆ. “ಮಾಡಿದ್ದೀನಿ ಸರ್ , ನಾವು ಮನುಷ್ಯರೆಲ್ಲ ಪಾಪಿಗಳು ಬರಿ ಪಾಪ ಕಾರ್ಯವನ್ನೇ ಮಾಡುತ್ತವೆ, ಈ ನಮ್ಮ ಪಾಪ ಕಾರ್ಯಗಳಿಂದ ನಮಗೆ ಸ್ವರ್ಗ ಪ್ರಾಪ್ತಿಯಾಗಬೇಕೆಂದರೆ ಇರುವುದು ಒಂದೇ ದಾರಿ ಅದು , ಈ ಲೋಕದಲ್ಲಿ ತನ್ನ ಮಕ್ಕಳಿಗೆ ಸ್ವರ್ಗ ಪ್ರಾಪ್ತಿ ಮಾಡಿಸಲು ಹುಟ್ಟಿ ಬಂದು ತನ್ನ ದೇಹವನ್ನು ನಮಗೋಸ್ಕರ ತ್ಯಾಗ ಮಾಡಿದ ಜೀಸಸ್ ಅನ್ನು ನಂಬಿದರೆ ಮಾತ್ರ ಸಾಧ್ಯ”.

ನಾ ಕೇಳಿದೆ “ಅಂದ್ರೆ , ಈಗ ನಾನು ಸ್ವರ್ಗಕ್ಕೆ ಹೋಗಬೇಕು ಅಂದ್ರೆ ಜೀಸಸ್ ಅನ್ನು ನಂಬಲೆಬೇಕೆ?”, ಅದಕ್ಕೆ ಅವನು ಅದು ನಿಮಗೆ ಬಿಟ್ಟಿದ್ದು ಸರ್ ಅಂದ, ಮತ್ತೆ ಮುಂದುವರೆದು ಈ ಜಗತ್ತಿನಲ್ಲಿ ಬೈಬಲ್ ಒಂದೇ ಸತ್ಯ, ಅದು ಮಾತ್ರ ಸತ್ಯ ಅಂದ ಮೇಲೆ ಉಳಿದವೆಲ್ಲ ಸುಳ್ಳು ಅಂತಾಗುತ್ತದೆ, ಹಾಗೆ ದೇವರು ನಮ್ಮ ಪಾಪ ಕಾರ್ಯಗಳನ್ನು ತೊಳೆಯಲು ಒಮ್ಮೆ ಮಾತ್ರ ಬರುತ್ತಾನೆ ಅಂದ.
ಆದಕ್ಕೆ ನಾನು , ” ಜೀಸಸ್ ಬಹಳ ಗ್ರೇಟು ಅವನು ನಮ್ಮನ್ತಹವರಿಗೊಸ್ಕರ ಒಮ್ಮೆ ಹುಟ್ಟಿ ಬಂದ , ಆದರೆ ನಮ್ಮ ದೇವರು ಯುಗ ಯುಗಗಳಲ್ಲಿ ನಮಗೋಸ್ಕರ ಹುಟ್ಟಿ ಬರುತ್ತಲೇ ಇರುತ್ತಾರೆ” ಅಂದೆ.
ಅನ್ನುವಷ್ಟರಲ್ಲಿ ಅವನು ಮಧ್ಯ ಏನೋ ಹೇಳ ಹೊರಟ ತಡೆದು ಹೇಳಿದೆ , ಇಷ್ಟೊತ್ತು ನೀವು ಬೈಬಲ್ ಬಗ್ಗೆ ಹೇಳಿದ್ರಿ ನಾನು ಕೇಳಿದೆ , ಈಗ ನಾನು ಹೇಳುತ್ತೇನೆ ನೀವು ಕೇಳಿ ಅಂತ ಮುಂದುವರೆಸಿದೆ,

“ಬೈಬಲ್ ನಿಮಗಿಷ್ಟವಾದರೆ ಒಳ್ಳೆಯದು ಆದರೆ ಬೇರೆ ಧರ್ಮ ಗ್ರಂಥಗಳೆಲ್ಲ ಸುಳ್ಳು ಅಂತ ಯಾಕ್ರೀ ಹೇಳ್ತಿರಾ? ನಿಮಗೆ ಬೈಬಲ್ ಹೆಚ್ಚು.ನನಗೆ ನನ್ನ ಭಗವದ್ಗೀತೆ,ಮುಸಲ್ಮನನಿಗೆ ಕುರಾನ್,ಸಿಕ್ಖರಿಗೆ ಗ್ರಂಥ ಸಾಹೀಬ್. ನಿಮಗೆ ಕ್ರೈಸ್ತನಾಗಿರಲು ಹೇಗೆ ಸ್ವತಂತ್ರವಿದೆಯೋ, ಹಾಗೂ ನಿಮಗೆ ನಿಮ್ಮ ಧರ್ಮದ ಮೇಲೆ ಎಷ್ಟು ಪ್ರೀತಿ ಇದೆಯೋ , ಎಲ್ಲರಿಗೂ ಅವರವರ ಧರ್ಮದಲ್ಲಿ ಅಷ್ಟೇ ಪ್ರೀತಿ,ನಂಬಿಕೆ ಇರುತ್ತದೆ , ಆ ನಂಬಿಕೆಯನ್ನು ಪ್ರಶ್ನಿಸಬೇಡಿ, ಅದೇನೋ ಸತ್ತ ಮೇಲೆ ಹೋಗೋ ಸ್ವರ್ಗದ ಬಗ್ಗೆ ಮಾತಾಡುತ್ತ , ಬದುಕಿರುವವರನ್ನು ಧರ್ಮದ ಸಂಕೋಲೆಯಲ್ಲಿ ಸಿಕ್ಕಿಸಿ ಇಲ್ಲಿ ನರಕ ಸೃಷ್ಟಿ ಮಾಡಬೇಡಿ” ಅಂತ ಹೇಳಿ ಕೈಯಲ್ಲಿದ್ದ ರಾಮನವಮಿಯ ಪ್ರಸಾದವನ್ನು ಕೊಟ್ಟು ಅವನನ್ನು ಬೀಳ್ಕೊಟ್ಟೆ.

ಅವನು ಹೋದ ನಂತರ ಗೆಳೆಯ ಕಾರ್ತಿಕ್ ಕೇಳಿದ , “ಅಲ್ಲ ಗುರು ಅವನೇನೋ ಕೆಲ್ಸಕ್ಕೆ ಬಾರದ ವಿಷಯ ಹೇಳ್ತಾ ಇದ್ರೆ ನೀನ್ ಕೇಳ್ತಾ ಇದ್ಯಲ್ಲ”
ನಾ ಹೇಳಿದೆ ” ನೋಡಪ್ಪ , ಅವನು ಹೇಗೆ ನಮ್ಮ ತಲೆ ಸವರಿ ಕಿವಿಗೆ ಹೂವಿಡಲು ಬಂದನೋ, ನಾನು ಅಷ್ಟೇ ನೀಟಾಗಿ ಅವನ ತಲೆ ಸವರಿ ಪ್ರೀತಿಯಿಂದ ಆ ಹೂವನ್ನು ಅವನ ಕೈಗೆ ಕೊಟ್ಟು ಬಂದೆ, ಅಷ್ಟೇ”

ಈ ಎಲ್ಲ ಪ್ರಹಸನ ಮುಗಿದ ಮೇಲೆ ನನ್ನೊಳಗೆ ನಾನು ಕೇಳಿಕೊಂಡ ಪ್ರಶ್ನೆ “ಮಂಗಳೂರಿನಲ್ಲಿ ಚರ್ಚ್ ಮೇಲೆ ನಡೆದ ದಾಳಿ ಸುಮ್ಮನೆ ಆಗಿರಲಿಕ್ಕಿಲ್ಲ ”

13 thoughts on “ನೀವು ಸ್ವರ್ಗಕ್ಕೆ ಹೋಗಬೇಕಾ? – ಹಾಗಿದ್ರೆ ……..!!!

Add yours

 1. ತುಂಬ ಒಳ್ಳೆದು ಮಾಡಿದ್ರಿ, ನನಗೂ ಇದೇ ಅನುಭವವಾಯ್ತು. ನಾನು ಹೀಗೆ ಉತ್ತರ ಕೊಟ್ಟು ಅವರನ್ನು ಸಾಗಿಸಿದ್ದೆನೆ. ನಿಮ್ಮ ಬರೆಯುವ ಶೈಲಿ ಚನ್ನಾಗಿದೆ. ಮುಂದುವರೆಸಿ.
  ಅಕ್ಷತ.

   1. ರಾಕೇಶ್‌‌ ಶೆಟ್ಟಿಯವರೇ ತಮ್ಮ ಧರ್ಮಕ್ಕೆ ಸೇರಿಸಲು ಇತರ ಧರ್ಮಗಳನ್ನು ಹೀಗಳೆಯುವುದು ಅತಿ ದೊಡ್ಡ ತಪ್ಪು. ಸುಳ್ಳು ಹೇಳಿ ಜನರನ್ನು ತಪ್ಪುದಾರಿಗೆಳೆದು ಮತಾಂತರಿಸಿದರೆ ಅದು ಅವರ ಆಯ್ಕೆ ಆದರೂ ಬಲವಂತದ ಮತಾಂತರವೇ ಅನ್ನುವುದು ನನ್ನ ಅನಿಸಿಕೆ

 2. ರಾಕೇಶ್ ಲೇಖನ ಚೆನ್ನಾಗಿದೆ. ನಿಮ್ಮ ಕೆಲ ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಬಹುದೆ. ಆದರೆ ಅಲ್ಲಿ ಹೆಸರು ಪ್ರಕಟವಾಗುವುದಿಲ್ಲ. ಕಾರಣ ಸುದ್ದಿಯಂತೆ ಪ್ರಕಟವಾಗುತ್ತದೆ. ನಿಮಗೆ ಇಷ್ಟವಿದ್ದರೆ ಮಾತ್ರ. ಧನ್ಯವಾದಗಳು
  ಸುರೇಶ್ ನಾಡಿಗ್
  sureshndg510@gmail.com

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

<span>%d</span> bloggers like this: