‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !?

ಶೀರ್ಷಿಕೆ ನೋಡಿ ಬಹಳಷ್ಟು ಮಂದಿಗೆ ನಗು ಬಂದಿರುತ್ತೆ,ಫೋಟೋ ನೋಡಿ ಇನ್ನ ನಗು ಬಂದು,ಈ ಹುಡ್ಗನಿಗೆ ಹುಚ್ಚು,ಅಹಂ ಅಥವಾ ತಿರುಕನ ಕನಸು ಅನ್ನಿಸಿರುತ್ತೆ ಅಲ್ವಾ? ಅನ್ನಿಸೊದು ಸಹಜ ಬಿಡಿ.ಆ ತರ ಅನ್ನಿಸೋದೊರೆಲ್ಲ ಅದನ್ನ ಈ ರೀತಿ ಓದ್ಕೊಳ್ಳಿ (ರಾಕೇಶ್ ಶೆಟ್ಟಿ= ಭಾರತದ ಸಾಮನ್ಯ ಪ್ರಜೆ.ಇಲ್ಲಿ ನನ್ನ ಹೆಸರು ಕಿತ್ತಾಕಿ ನಿಮ್ದೆ ಹಾಕೊಂಡು ಓದಿ,ನಾನೇನು ಪಿ.ಎಂ ಸೀಟಿಗಾಗಿ ಕಾಯ್ತಿಲ್ಲವಾದ್ದರಿಂದ ಖಂಡಿತ ಬೇಜಾರ್ ಮಾಡ್ಕೊಳ್ಳೋದಿಲ್ಲ 😉 )

ಸರಿ.ನಾನ್ ಪಿ.ಎಂ ಆಗ್ಬಹುದಾ? ಯಾಕ್ ಆಗಲ್ಲ, ಎಷ್ಟಾದ್ರೂ ನಮ್ದು ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲೊಂದು.ಇಲ್ಲಿ ಅರ್ಹತೆಯಿರುವ ಯಾವುದಾದರು ಸಾಮನ್ಯ ಪ್ರಜೆ ಪಿ.ಎಂ ಆಗಬಹುದು ಬಿಡಪ್ಪ ಅಂತ ನೀವ್ಯಾರು ಹೇಳೋದಿಲ್ಲ.  ಹೇಳೋಕೆ ಸಾಧ್ಯಾನೆ ಇಲ್ಲ ಬಿಡಿ.ಈ ದೇಶದಲ್ಲಿ ಸದ್ಯ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರೋದು ’ವಂಶ ಪ್ರಭುತ್ವ’ ಸದ್ಯಕ್ಕೆ ಈ ವಿಷಯದಲ್ಲಿ ಲೆಫ್ಟ್ ಪಾರ್ಟಿ ಅವ್ರು ಮಾತ್ರ ರೈಟ್ ಆಗಿದ್ದಾರೆ.ಉಳಿದಂತೆ ರೈಟ್ ಪಾರ್ಟಿಗಳು ಲೆಫ್ಟ್ ಆಗ್ಬಿಟ್ಟಿವೆ.ಇನ್ನ ೧೨೫ ವರ್ಷಗಳ ಇತಿಹಾಸ ಹೊಂದಿರೋ ಈ ದೇಶದ ರಾಷ್ಟ್ರೀಯ ಪಕ್ಷದ ಕತೆ ಕೇಳೋದೇ ಬೇಡ ಬಿಡಿ.ಸ್ವತಃ ಗಾಂಧೀ ತಾತನೆ ಅಪ್ಪ (ಮೋತಿಲಾಲ್ ನೆಹರು) ಕೂತಿದ್ದ್ (ನೆಟ್ಟಿದ್ ಅಲ್ಲ 😉  ) ಮನೆ ಒಳ್ಗೆ ನೀನ್ ಕೂತ್ಕೊ ಬಾ ಅಂತ ಮಗನ (ಚಾಚ ನೆಹರು) ಕರ್ಕೊಂಡು ಬಂದು ವಂಶ ವೃಕ್ಷ ನೆಟ್ಟು ಹೋದ್ರು.ಆ ವೃಕ್ಷ ಇವತ್ತಿಗೆ ಅದ್ಯಾವ ಪರಿ ಗಟ್ಟಿಯಾಗಿ ಬೆಳೆದು ನಿಂತಿದೆ ಅಂದ್ರೆ ೧೨೫ ವರ್ಷಗಳ ಪುರಾತನ ಮನೆಯ ಬುಡ ಅಲುಗಾಡಿ ಬಕ್ಕಾ ಬೋರಲು ಬಿದ್ದು ‘ ಆ ವಂಶ’ದ ಪಾಲಾಗಿದೆ..

ಅಂತ ವಂಶದ ೪೦ ಹರೆಯದ ಯುವಕ ರಾಹುಲ್ ಗಾಂಧೀ ಎಲ್ಲಿ?,ಇತ್ತ ಆಲದ ಮರವು ಇಲ್ಲ ,ವಂಶಸ್ಥರ ಮನೆಯು ಇಲ್ಲದ ೨೬ ರ ಹರೆಯದ ಈ ಬಾಲಕ ಎಲ್ಲಿ ಸ್ವಾಮೀ? (೪೦ರ ಹರೆಯದವನನ್ನ ಯುವಕ ಅನ್ನಬಹುದಾದರೆ ೨೬ ಹರೆಯದವನನ್ನ ಬಾಲಕ ಅನ್ನಬಹುದು ಅಂತ ನಾನ್ ಅನ್ಕೊಂಡಿದ್ದೀನಿ 😉 ,೪೦ರ ಹರೆಯದ ಬೇರೆ ಯುವಕರು ಬೇಸರಿಸಿದರಿ :)) ಆ ಯುವಕ ಹೋದ ಕಡೆಗೆಲ್ಲ ಅವನ ವಂಧಿಮಾಧಿಗ ಮಾಧ್ಯಮಗಳು,ಕ್ಯಾಮೆರಾಗಳು ಎಲ್ಲ ಓಡಾಡ್ತವೆ.ಹುಡ್ಗ ಬೇರೆ ನೋಡೋಕೆ ಕೆಂಪ್ ಕೆಂಪ್ಗೆ ಇರೋದ್ರಿಂದ ಕಾಲೇಜ್ ಕ್ಯಾಂಪಸ್ಗೆ ಹೋದ ತಕ್ಷಣ ಹುಡ್ಗೀರು ಬಂದು ಸುತ್ತಾಕ್ಕೊಂಡು ಫೋಟೋ ತೆಗೆಸ್ಕೊತಾರೆ.ಅದನ್ನ ಮೀಡಿಯಾದವರು ಏಕ್ತಾ ಕಪೂರ್ ಸ್ಟೈಲ್ನಲ್ಲಿ ಮೇಘಾ ಸಿರಿಯಲ್ ಮಾಡಿ ಜನ ನಾಯಕನ (?) ನೋಡಿ ಸ್ವಾಮೀ ಅಂತ ತೋರ್ಸಿದ್ದೆ ತೋರ್ಸಿದ್ದು.ಅವ್ನು ಬೀದಿ ಬದಿ ಬಿದ್ದಿರೋ ಪ್ಲಾಸ್ಟಿಕ್ ಎತ್ತಿದ್ದು ದೊಡ್ಡ ನ್ಯೂಸ್,ಪ್ಲಾಸ್ಟಿಕ್ ಬೀದಿಗೆಸೆದ್ರು ನ್ಯೂಸ್,ಕೂಲಿ ಜನರ ಮಧ್ಯೆ ಹೋಗಿ ಖಾಲಿ ಬಾಂಡ್ಲಿ ತಲೆ ಮೇಲ್ ಹೊತ್ರು ನ್ಯೂಸ್.ಶೇವ್ ಮಾಡ್ಕೊಂಡು ಬಂದ್ರೆ ನೋಡಪ್ಪ ಎಷ್ಟು ನೀಟಾಗ್ ಬರ್ತಾನೆ ಅಂತ ಒಂದು ಎಪಿಸೋಡು,ಮಾಡದೆ ಗಡ್ಡಧಾರಿಯಾಗಿ ಬಂದ್ರೆ ದೇಸದ ಬಗ್ಗೆ ಚಿಂತೆ ಮಾಡಿ ಮಾಡಿ ಹೆಂಗಾಗವ್ನೆ ನೋಡಿ ನಮ್ ಜನ ನಾಯಕ (?) ಅಂತ ಇನ್ನೊಂದು ಎಪಿಸೋಡು.ಯಪ್ಪಾ ಸಿವ್ನೆ! ಈ ಸೀರಿಯಲ್ಗಳು ಸದ್ಯಕ್ಕೆ ಇಂಗ್ಲಿಷ್-ಹಿಂದಿ ಮಾಧ್ಯಮಗಳಲ್ಲಿ ಮಾತ್ರ ಪ್ರಸಾರವಾಗ್ತಾ ಇದೆ,ಸದ್ಯ ಕನ್ನಡದಲ್ಲಿ ಬಂದಿಲ್ವಲ್ಲಪ್ಪ ಅನ್ಕೊಳ್ಳೋ ಅಷ್ಟರಲ್ಲೇ ಹೊದ್ ತಿಂಗ್ಳು ತಾನೇ ‘ನೆಕ್ಸ್ಟ್’  ಬಂದ ನೋಡ್ರಪ್ಪ ಮುಂದಿನ ಪಿ.ಎಮ್ಮು ಅಂತ ಮೂರು ಮೂರು ಪುಟ ಮೀಸಲಾತಿ ಕೊಟ್ಬುಟ್ರಲ್ಲಪ್ಪ!!!

ಮಾಧ್ಯಮಗಳು ಕೊಡೋ ಈ ಪರಿ ಪ್ರಚಾರದಿಂದಲೋ ಏನೋ,ಇತ್ತೀಚೀಗೆ ಭರ್ಜರಿ ಕಮೆಂಟ್ಸ್ ಕೊಡೋಕೆ ಶುರು ಹಚ್ಕೊಂಡಿದ್ದಾರೆ ರಾಹುಲ್.ಬಂಗಾಳಕ್ಕೆ ಹೊದವ್ರು ಕಮ್ಯುನಿಸ್ಟರು ಕಾಲ ಇಲ್ಲಿ ಮುಗಿಯಲಿದೆ ಅಂದ್ರು,ಒಪ್ಪಿಕೊಳ್ಳೋ ಮಾತೆ ಬಿಡಿ.ಅದಕ್ಕೆ ಯಥಾ ಪ್ರಕಾರ ಭರ್ಜರಿ ಪ್ರಚಾರ ಸಿಕ್ಕಿತ್ತಲ್ಲ ಅದೆ ಜೊಶೀನಲ್ಲಿ ಆರ್.ಎಸ್.ಎಸ್ ನಂತ ದೇಶ ಭಕ್ತ ಸಂಘಟನೆಯನ್ನ ದೇಶ ದ್ರೋಹಿ ಕೆಲಸಗಳಿಂದಾಗಿ ನಿಷೇದಕ್ಕೊಳಪಟ್ಟಿರೋ ಸಿಮಿಯಂತ ಸಂಘಟನೆಯೊಂದಿಗೆ ಹೋಲಿಸುತ್ತಾರಲ್ಲ ಇದಕ್ಕೆ ಏನ್ ಹೇಳೋಣ ಸ್ವಾಮಿ!? “ನಾರ್ಮಲ್ ಆಗಿರೊವ್ರು ಇಂತ ಹೇಳಿಕೆ ಕೊಡೊದಿಲ್ಲ” ಅಂತ ಆರ್.ಎಸ್.ಎಸ್ನವ್ರು ಸರಿಯಾಗೆ ತಿರುಗೆಟು ನೀಡಿದ್ದಾರೆ.ದೇಶದ ಯಾವುದೆ ಮೂಲೆಯಲ್ಲಿ ಅವಘಡವಾದರೆ ಬಹುತೇಕ ಸಂದರ್ಭದಲ್ಲಿ ಸರ್ಕಾರಕ್ಕಿಂತ ಮೊದಲು ಅಲ್ಲಿ ತಲುಪಿ ಸಹಾಯ ಹಸ್ತ ಚಾಚುವವ್ರು ಇದೆ ಆರ್.ಎಸ್.ಎಸ್ಸಿಗರು ಅನ್ನುವುದು ಇವರಿಗೆ ಗೊತ್ತಿರಲಿಕ್ಕಿಲ್ಲ ಅಥವ ಗೊತ್ತಿದ್ದರು ಇಂತವೆಲ್ಲ ಹೇಳಿಕೊಳ್ಳಲಾಗದು ಬಿಡಿ ವೋಟಿನ ಮ್ಯಾಟರ್ ಅಲ್ವಾ?

ಅಷ್ಟಕ್ಕೂ ಈ ಹುಡ್ಗನಲ್ಲಿ ಪಿ.ಎಂ ಆಗೋಕೆ ಇರೋ ಅರ್ಹತೆಯಾದ್ರು ಏನು? ಸಂಸದನಾಗಿ ಒಳ್ಳೆ ಕೆಲ್ಸ ಮಾಡಿರೋದಾ? ಇಲ್ಲ ಜನರೊಂದಿಗೆ ಸುಲಭವಾಗಿ ಬೆರಿತಾರೆ ಅನ್ನೋದಾ? ಅವೆಲ್ಲ ಅಲ್ಲ ಅವೆಲ್ಲಕ್ಕಿಂತ ಮುಖ್ಯವಾಗಿ ಅವರು ‘ಆ ವಂಶಸ್ಥ’,ಅವ್ರ ಹೆಸರಿನ ಮುಂದೆ ಗಾಂಧೀ ಇದೆ ನೋಡಿ ಅದಿಕ್ಕೆ ಮುಂದಿನ ಪಿ.ಎಂ ಕ್ಯಾಂಡಿಟೇಟ್ ಅಷ್ಟೇ.ಅವರಲ್ಲಿ ಆ ಶಕ್ತಿ ಇದೆಯೋ ಇಲ್ವೋ ಗೊತ್ತಿಲ್ಲ ಆದರೆ ಭವಿಷ್ಯದ ಆಶಾಕಿರಣ ಎಂಬಂತೆ ಅವರನ್ನ ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗುತ್ತಿದೆ.ಪಕ್ಷದಲ್ಲಿ,ಮಾಧ್ಯಮಗಳಲ್ಲಿ ವಂಧಿ ಮಾಧಿಗರಿರುವಾಗ ಈ ಕೆಲ್ಸ ಇನ್ನ ಸುಲಭ ಆಗಿದೆ.

ಇಷ್ಟಕ್ಕೂ ಆ ಹುಡ್ಗ ಆದರು ಏನ್ ತಾನೇ ಮಾಡಿಯಾನು ಪಾಪ! ಪಕ್ಷದಲ್ಲಿ ಸದ್ಯಕ್ಕೆ ‘ನಾಯಕ’ ಅವನೊಬ್ಬನೇ ತಾನೇ.ಅವ್ರಮ್ಮನೆ ಸತತ ೪ ಬಾರಿ ಅಧ್ಯಕ್ಷ ಪಟ್ಟದಲ್ಲಿ ಕೂತಿದ್ದಾರೆ.ಈ ವಿಷಯದಲ್ಲಿ ಗಿನ್ನೆಸ್ ರೆಕಾರ್ಡ್ ಏನಾದ್ರೂ ಆದರು ಆಗ್ಬಹುದು ಅನ್ನಿಸುತ್ತೆ ಈ ಪಕ್ಷದಲ್ಲಿ.ಇನ್ನುಳಿದವರೆಲ್ಲ ಅದಿನ್ನೆಷ್ಟೇ ಪ್ರತಿಭೆ ಹೊಂದಿದ್ದರು,.ಕಾರ್ಯಕರ್ತನಾಗಿ,ಕೌನ್ಸಿಲರ್,MLA,MP ಯಾಗಿ,ರಾಜ್ಯ ಮಂತಿ,ಕೇಂದ್ರ ಮಂತ್ರಿ ಆಗಿ ಎಷ್ಟೆಲ್ಲಾ ಅನುಭವ ಪಡೆದಿದ್ದರೂ ‘ಗಾಂಧೀ’ಗಿರಿ ಇಲ್ಲದೆ ಇರೋದ್ರಿಂದ ಅವ್ರಿಗೆ ಪಟ್ಟ ಸಿಗೋದಿಲ್ಲ.ಅವನಿಗೆ ಪಟ್ಟ ಕೊಡಬೇಡಿ ಅಂತ ಏನಾದ್ರೂ ಬಹಿರಂಗವಾಗಿ ಹೇಳಿದ್ರೆ ಆ ಪಕ್ಷದಲ್ಲೂ ಇರೋಕಾಗೋಲ್ಲ.ಹಾಗಾಗಿ ಎಲ್ಲರು ‘ಜೈ ಜೈ’ ಅಂತಿದ್ದಾರೆ.

ಮೊನ್ನೆ ಮೊನ್ನೆ ತಾನೆ ರಾಹುಲ್ ಅವ್ರ ಭಾವ ರಾಬರ್ಟ್ ವಾದ್ರ ಅವ್ರು ’ನಾನು ಈ ದೇಶದ ಯಾವುದೆ ಮೂಲೆಯಲ್ಲಿ ಚುನವಣೆಗೆ ನಿಂತ್ರು ಗೆದ್ದು ಬರ್ತಿನಿ’ ಅಂದಿದ್ದಾರೆ.ಅವ್ರಿಗೆ ನನ್ ಆಹ್ವಾನವಿದೆ.”ಮಿ.ವಾದ್ರ ದೇಶದ ಯಾವುದೋ ಮೂಲೆ ಯಾಕೆ, ಬನ್ನಿ ಸ್ವಾಮಿ ನಮ್ಮ್ ಕರ್ನಾಟಕಕ್ಕೆ.ಚುನಾವಣೆಗೆ ನಿಲ್ಲಿ, ನೋಡೆ ಬಿಡೋಣ ಯಾರ್ ಗೆಲ್ತಾರೆ ಅಂತ,ಬರ್ತಿರಾ?” (ಯಾರಾದ್ರು ಕಾಂಗ್ರೆಸ್ ಅಥವ ನೆಹರು ಫ಼್ಯಾಮಿಲಿ ಅಭಿಮಾನಿಗಳು ಇದನ್ನ ಆಂಗ್ಲ ಭಾಶೆಗೆ ತರ್ಜುಮೆ ಮಾಡಿ ತಲುಪಿಸಿ ಪುಣ್ಯ ಕಟ್ಕೊಳ್ಳಿ :),ಅವ್ರು ಹೇಳಿಕೆ ಕೊಟ್ಟಿರೋ ಆಂಗ್ಲ ಪತ್ರಿಕೆಯಲ್ಲೂ ಈ ಕಾಮೆಂಟ್ ಇದೆ ಅವ್ರು ಓದ್ಬೇಕಷ್ಟೇ )

ಭಟ್ಟಂಗಿತನದ ಮತ್ತೊಂದು ಉದಾಹರಣೆ ಅಂದ್ರೆ ಮೊನ್ನೆ ಆ ಪಕ್ಷದ ವಕ್ತಾರರು ರಾಹುಲ್ ಗಾಂಧಿ ಅವರನ್ನ ’ಲೋಕನಾಯಕ ಜಯಪ್ರಕಾಶ್ ನಾರಯಣ್’ ಅವರಿಗೆ ಹೋಲಿಸಿದ್ದು!! ಬಹುಶಃ ಮುಂದಿನ ಹೋಲಿಕೆ ’ಮಹಾತ್ಮ ಗಾಂಧಿ’ಯವರೊಂದಿಗಿರಬೇಕು!!

ಅಲ್ಲ ಇವ್ರೆಲ್ಲ ಈ ದೇಶವನ್ನ ಏನ್ ಅನ್ಕೊಂಡಿದ್ದಾರೆ ಅಂತ!? ಗಾಂಧಿ ನಾಮ ಹೇಳ್ತ ಇನ್ನ ಎಶ್ಟು ದಿನ ಅಂತ ರಾಜಕೀಯ ಮಾಡ್ತಾರೆ? ಸುಮ್ಮನೆ ಬಂದಿಲ್ಲ ನಮಗೆ ಸ್ವಾತಂತ್ರ್ಯ, ಅಲ್ಲಿ ಕೇವಲ ಗಾಂಧಿ,ನೆಹರು ಇರ್ಲಿಲ್ಲ ಸರ್.ಅಲ್ಲಿ ಬ್ರಿಟಿಷರ ಗುಂಡಿಗೆ ಎದೆ ಕೊಟ್ಟ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ೧೩ ವರ್ಶದ ಪೊರ ನಾರಯಣ ಮಹದೇವ ಧೋನಿಯಿಂದ ಹಿಡಿದು ೮೩ರ ಇಳಿ ವಯಸ್ಸಿನಲ್ಲು ಬ್ರಿಟಿಷರ ನಿದ್ದೆಗೆಡಿಸಿದ್ದ ಕುವರ್ ಸಿಂಗ್ರಂತವರು ಇದ್ದಾರೆ.ನಮ್ಮ್ ದೇಶದ ದೌರ್ಭಾಗ್ಯವೋ ಏನೋ,೨೦ ರ ಹರೆಯದಲ್ಲೆ ದೇಶದ ಸಂವಿಧಾನದ ಬಗ್ಗೆ ಮಾತನಾಡುತಿದ್ದ ಭಗತ್ ಸಿಂಗ್,ಬ್ರಿಟಿಷರ ಬುಡ ಅಲುಗಾಡಿಸಿ ’ಕ್ವಿಟ್ ಇಂಡಿಯ’ ಚಳುವಳಿಗೆ ಪರೋಕ್ಷ ಕಾರಣಕರ್ತರಾದ ಸಮರ ಸೇನಾನಿ ಸುಭಾಶ್ ಚಂದ್ರ ಬೋಸ್,ಬಾಪುಜಿಯವರ ಆದರ್ಶದ ಮಾತುಗಳನ್ನ ವಾಸ್ತವಕ್ಕೆ ತರುತಿದ್ದ ಸರಳ ಸಜ್ಜನಿಕೆಯ ಸಾಕರ ಮೂರ್ತಿ ಲಾಲ್ ಬಹದ್ದೂರ್ ಶಾಸ್ತ್ರಿ ಇವರೆಲ್ಲರು ಅದೇನೋ ತುರ್ತು ಕೆಲಸವಿದೆ ಅನ್ನುವಂತೆ ಹೊರಟು ಹೋಗಿಬಿಟ್ಟರು 😦

ಯಾವುದೇ ವಂಶ ಹಿನ್ನೆಲೆಯಿಂದ ಅಲ್ಲದೆ ಕೇವಲ ತನ್ನ ಸಾಮರ್ಥ್ಯದಿಂದಲೆ ಪ್ರಧಾನಿ ಹುದ್ದೆಯನ್ನ ಶಾಸ್ತ್ರಿಗಳು ಅಲಂಕರಿಸುವುದರ ಮೂಲಕ ಪ್ರಜಾಪ್ರಭುತ್ವದ ಆಶಯ ಸಾಕರವಾಗಿತ್ತು,ಆದರೆ ಅವರ ಹಠಾತ್ ನಿಧನದಿಂದ ಮತ್ತದು ವಂಶಾಡಳಿತದ ತೆಕ್ಕೆಗೆ ಬಿತ್ತು.

ಪ್ರಜಾಪ್ರಭುತ್ವದ ಅಣಕವಾದ ಈ ‘ವಂಶ ಪ್ರಭುತ್ವ’ ಮೊದಲು ಶುರು ಮಾಡಿದ ಶ್ರೇಯಸ್ಸು ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿಗೆ’ ಸಲ್ಲಬೇಕು.ಇದೆ ವಿಷಯ ಹಿಡಿದು ಜೆ.ಪಿ ಕಾಲದಲ್ಲಿ ಕಾಂಗ್ರೆಸ್ಸ್ ಮೇಲೆ ಪ್ರಹಾರ ನಡೆಸುತಿದ್ದ ಪ್ರತಿಪಕ್ಷಗಳಿಗೂ ಈಗ ಈ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ಉಳಿದಿಲ್ಲ.ಈಗ ಅವರು ವಂಶಾಡಳಿತದ ಪಾಲುದಾರರೆ ಆಗಿದ್ದಾರೆ. ಬಿ.ಜೆ.ಪಿ,ಡಿ.ಎಂ.ಕೆ,ನ್ಯಾಷನಲ್ ಕಾನ್ಫಾರೆನ್ಸ್,ಸಮಾಜವಾದಿ ಪಾರ್ಟಿ,ಬಿಜು ಜನತಾದಳ,ಜೆ.ಡಿ.ಎಸ್,ಎನ್.ಸಿ.ಪಿ,ಶಿವ ಸೇನೆ,ಶಿರೋಮಣಿ ಅಕಾಲಿ ದಳ… ಇನ್ನ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಬ್ರಿಟಿಷರ ಕಾಲದಲ್ಲಿ ಹಾಗು ಅವರು ಬರುವ ಮೊದಲು ರಾಜ ಪ್ರಭುತ್ವವಿತ್ತು.ಅವ್ರು ಬಂದು ಹೋದ್ಮೇಲೆ ಕೂಡ ಅದೇ ಮುಂದುವರೆದಿದೆ.ಪ್ರಜಾಪ್ರಭುತ್ವದ ಚಾದರದೊಳಗೆ ವಂಶಪ್ರಭುತ್ವದ *** ಸಾಗಿದೆ.’ಜನ ಗಣ ಮನ’ದಲ್ಲಿ ‘ಜನ’ ನಾಪತ್ತೆಯಾಗಿ ‘ಸಂತಾನ’ ಬಂದು ಕೂತಿದೆ.

ತುತ್ತಿನ ಚೀಲದ ತುರ್ತಿಗೆ ಬಿದ್ದ ದೇಶದ ಬಹುತೇಕ ಯುವ ಜನರಿಗೆ ಈ ಅಸಹ್ಯ ಕಂಡು ಸಾಕಾಗಿದೆ,ಬೇರೆನು ಮಾಡಲು ಸಾಧ್ಯವಾಗದೆ ಮತ ಚಲಾಯಿಸುವುದನ್ನ ನಿಲ್ಲಿಸಿದ್ದಾರೆ.ಅಸಹ್ಯಗಳಿಗೆ ಬೆನ್ನು ತೋರಿಸುವುದರ ಬದಲು ಕಡೆ ಪಕ್ಷ ಎದುರಿಸಿ ನಿಲ್ಲೋಣ.ಅಪ್ಪ-ಅಮ್ಮನ ನಾಮ ಬಲದಿಂದ ಬಂದು ನಿಲ್ಲುವ ಸೊ ಕಾಲ್ಡ್ ನಾಯಕರನ್ನ ಮನೆಗೆ ಕಳಿಸುವ ಚಿಕ್ಕ ಜವಭ್ದಾರಿ ನಿಭಾಯಿಸಲಾದರು ಇನ್ಮುನ್ದೆ ಮತ ಚಲಾಯಿಸೋಣ.ನಮ್ಮ “ಜನ’ ಯೋಚಿಸುವ ಶೈಲಿ ಬದಲಾದರೆ ಎಲ್ಲವು ಬದಲಾಗುತ್ತದೆ.

‘ಪ್ರಜೆ’ಗಳು ಬದಲಾಗದೆ ’ಪ್ರಜಾಪ್ರಭುತ್ವ’ವು ಬದಲಾಗದು.

ರಾಕೇಶ್ ಶೆಟ್ಟಿ 🙂

25 thoughts on “‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !?

Add yours

 1. ಈ ಲೇಖನ ಓದಿದಾಗ ರಾಹುಲನಿಗಿಂತ ರಾಕೇಶನೇ ಪ್ರಧಾನಿಯಾಗಲು ಯೋಗ್ಯ ಎಂದು ನನಗಂತೂ ಅನ್ನಿಸಿದೆ. ಆದರೇನು ಮಾಡುವುದು, ರಾಕೇಶನ ಸುತ್ತ ಕೊಳಕು ರಾಜಕಾರಣದ ಪ್ರಭಾವಳಿ ಇಲ್ಲ. ಇಷ್ಟಕ್ಕೂ, ಯಾರಾದರೂ ಈ ಲೇಖನವನ್ನು ಇಂಗ್ಲಿಷಿಗೋ ಹಿಂದಿಗೋ ಅನುವಾದಿಸಿ ಆ ತಾಯಿ-ಮಗನ ಗಮನಕ್ಕೆ ತಂದಿದ್ದರೆ ಚೆನ್ನಾಗಿತ್ತು.:-)

 2. ಸಕತ್ ಲೇಖನ ರಾಕೇಶ್! ವಿದೇಶದಲ್ಲಿ ಓದಿ, ವಿದೇಶಿ ಹುಡುಗಿಯನ್ನ ಡೇಟಿಂಗ್ ಮಾಡಿಕೊಂಡು ಮಜ ಉಡಾಯಿಸಿರುವ , ಒಬ್ಬ ವಿದೇಶಿ ಮಹಿಳೆಯ ಪುತ್ರನಿಗಿಂತ ಅಪ್ಪಟ ಸ್ವದೇಶಿ ಹುಡುಗ ರಾಕೇಶನೆ ಯೋಗ್ಯ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ನನ್ನ ವೋಟು ನಿಮಗೆ.

 3. ಅಲ್ರೀ ಶೆಟ್ರೇ, ನಿಮ್ಮ ಲೇಖನ ಓದಿ ನನಗೂ ಆಸೆಯಾಗ್ಬಿಟ್ಟಿದೆಯಲ್ರೀ! ನೀವು ಆಗಿಯಪ್ಪಾ! ನಮ್ಮ ಬೆ೦ಬಲವಿದೆ.
  ರಾಹುಲ್ ಗಾ೦ಧಿ ತಾನೊಬ್ಬ ಮೂರ್ಖ ಅ೦ತ ತಾನೇ ಹೊದೆಡೆಯೆಲ್ಲಾ ಸಾಬೀತು ಮಾಡ್ತಿದಾನೆ! ಹೇಳಿಕೊಟ್ಟ ಪಾಠ ಕಟ್ಟಿಕೊಟ್ಟ ಬುತ್ತಿ ಎಷ್ಟು ದಿನದವರೆಗೂ ಸ್ವಾಮೀ? ಮೇಲೇರಿದವರೆಲ್ಲಾ ಕೆಳೆಗಿಳಿಯಲೇಬೇಕಲ್ವೇ! ಆದರೆ ತಾನು ಪುರಾತನ ಪಕ್ಷದವನು ಅ೦ಥ ಹುಚ್ಚುಚ್ಚಾಗೆಲ್ಲಾ ಆಡಬಾರದು! ಅವನ ಯೋಗ್ಯತೆ(?) ಗೆ ತಕ್ಕ ಮಾತು ಬಿಡಿ!

  ಲೇಖನ ಚೆನ್ನಾಗಿದೆ. ಯಾರಾದ್ರೂ ಅನುವಾದ ಮಾಡಿ, ಇಬ್ಬರಿಗೂ ತೋರಿಸಿದ್ರೆ ಒಳ್ಳೆದಾಗುತ್ತಿತ್ತು!

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 4. >>ಅಂತ ವಂಶದ ೪೦ ಹರೆಯದ ಯುವಕ ರಾಹುಲ್ ಗಾಂಧೀ ಎಲ್ಲಿ?,ಇತ್ತ ಆಲದ ಮರವು ಇಲ್ಲ ,ವಂಶಸ್ಥರ ಮನೆಯು ಇಲ್ಲದ ೨೬ ರ ಹರೆಯದ ಈ ಬಾಲಕ ಎಲ್ಲಿ ಸ್ವಾಮೀ? (೪೦ರ ಹರೆಯದವನನ್ನ ಯುವಕ ಅನ್ನಬಹುದಾದರೆ ೨೬ ಹರೆಯದವನನ್ನ ಬಾಲಕ ಅನ್ನಬಹುದು ಅಂತ ನಾನ್ ಅನ್ಕೊಂಡಿದ್ದೀನಿ << 😉

  ಲೇಖನ ಚೆನ್ನಾಗಿದೆ.

 5. ನೀವ್ ಆಗ್ಬೋದಿತ್ತು. ಆದ್ರೆ ನಿಮ್ಮನೆಯಿ೦ದ ಯಾರಾದ್ರೂ ಪಿಎಮ್ ಆಗಿದ್ದಾರಾ ಇಲ್ವಲ್ಲಾ? ಸೊ ನೀವ್ ಡಿಸ್ ಕ್ವಾಲಿಫೈಡ್ 😀
  ರಾಹುಲ್ ಗಾ೦ಧಿ ಹಾಗೂ ಈ ದರಿದ್ರ ಮೀಡಿಯಾಗಳ ಪ್ರಲಾಪ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ

 6. ಪ್ರಮೋದ್ ಹೇಳೋ ಹಾಗೆ ಆದರೆ ನನಗೆ ಅರ್ಹತೆ ಇದೆ 🙂 ಯಾಕಂದ್ರೆ ಪಿ.ವಿ. ನರಸಿಂಹ ರಾವ್ ನಂತರ ಅರವಿಂದ್ ರಾವ್ ಹೆಸರು ಸೂಕ್ತ ಅನಿಸುತ್ತೆ. 🙂

  ಓಟು ಕೊಡಿ ನಾನು ಅಲ್ಲಿ ನೋಟು ಎಣಿಸುತ್ತೇನೆ.

  ಅರವಿಂದ್

 7. ರಾಕೇಶ್,
  ತುಂಬ ವಳ್ಲೆಯ ಲೇಖನ ಸರ್..ನೀವು ಕೊಟ್ಟಿರೋ ಮಾಹಿತಿ ನೂರಕ್ಕೆ..ನೂರು ಸತ್ಯ ಗುರು..ಅವನಿಗೆ(ರಾಹುಲ್) ನಮ್ಮ ದೇಶದ ಬಗ್ಗೆ ಏನ್ ಗೊತ್ತು ಅಂತ ಇಸ್ಟೊಂದು ಯಗರಾಡ್ತ ಇದನೋ ಗೊತ್ತಿಲ್ಲ..ಆದ್ರೆ ಒಂದಂತ್ತು ಸತ್ಯ ಗಾಂಧಿ ನಾಮ ಅಳಿಸಿ ಹೊಗೋ ತನಕ ನಮ್ಮ ದೇಶಕ್ಕೆ ಹತ್ತಿರೋ ದರಿದ್ರ ಅಂತು ಹೋಗೋಲ್ಲ..!! x-(

 8. If Rahul Gandhi could become PM of this country then any- Anti National can become the PM of this country. Why because Rahul is against RSS which is serving this country, he is supporting SIMI, LET, Naxalites, LTTE like Anti National Elements. Kick this Italian product from this country.

 9. ಹಿಂದೆ ಹೀಗಿತ್ತಂತೆ (ಇಂದೂ ಇರಬಹುದು) – ಸುಣ್ಣ ಮಾಡೋ ಜನ, ಕಂಬಳಿ ಮಾಡೋ ಜನ, ಮಂತ್ರ ಹೇಳೋವ್ರು, ಮಲ ಎತ್ತೊವ್ರು.. ಅಂದ್ರೆ ಅವ್ರ ಮಕ್ಕಳು-ಮರಿಮಕ್ಕಳಾದಿಯಾಗಿ ಅದೇ ಕಸುಬಿನಲ್ಲಿ ಇರೋರು… ನಿನ್ನ ಲೇಖನ ಓದಿದ ಮೇಲೆ, I could co-relate .. ರಾಜಕೀಯ ಜಾತಿ ಅಂತಾನು ಇದೆ ಅನ್ಸುತ್ತಪ್ಪ! anyways ಒಳ್ಳೆ ಲೇಖನ. ಮುಂದುವರೆಸು. 🙂

  -ದರ್ಶನ್

  1. ಧನ್ಯವಾದ ದರ್ಶನ್ 🙂
   ಈ ರಾಹುಲ್ ಅನ್ನೋ ಯುವ ನಾಯಕ ಭವಿಷ್ಯದ ಆಶಾಕಿರಣ ಅನ್ನೋದೆಲ್ಲ ಕಾಂಗ್ರೆಸ್ಸಿನ ಚೇಲಾ ಮಾಧ್ಯಮಗಳ ವಂದಿಮಾದಿಗರ ಸೃಷ್ಟಿ ಅನ್ನಲು ಬಿಹಾರದ ಚುನಾವಣ ಫಲಿತಾಂಶಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

  1. ಸಂತೋಷ,

   ನಿನ್ನ ಬಾಯ್ ಹರಕೆಯಿಂದ ಹಾಗೆನಾದರು ಆಗುತ್ತಾ ನೊಡೋಣ ಮಾರಯ, ಇನ್ನ ಮತ್ತಿಕೆರೆ ಈಗ ಚೆನ್ನಾಗಿದೆ ಒಮ್ಮೆ ಮಂಗಳೂರಿನಿಂದ ಪುರುಸೊತ್ತು ಮಾಡಿಕೊಂಡು ಬಂದು ನೋಡು 🙂

 10. ತುಂಬಾ ಚೆನ್ನಾಗಿದೆ ರಾಕೇಶ್ ನವರೆ, ಈ ಬಡ್ಡಿ ಹೈದನಿಗಿರುವ (ಅ)ಸಾಮರ್ಥ್ಯಗಳು ಒಂದೇ ಎರಡೇ ಗುಳಿ ಕೆನ್ನೆ ಯುವಕ?, ತ್ಯಾಗ ಮೂರ್ತಿಯ ಮಗ, ದೇಶ ಕಂಡ ಮಹಾನ್ ಪಕ್ಷದ ಅಮೂಲ್ ಬೇಬಿ, ಹೆಪ್ರನ ತರ ನಗೋದು ( ಬಹುಶಃ ಈ ನಗು ಮೆಜೆಸ್ಟಿಕ್ ಬದಿಯಲ್ಲಿ ಹಣಕ್ಕಾಗಿ ದೇಹ ಮಾರೋರಿಗೆ ಹೋಲಿಕೆಯಾಗಬಹುದು )

 11. ರಾಕೇಶ್‌ ಅವರೇ ಇವತ್ತು ಯಾರೋ ಫೇಸ್‌ಬುಕ್‌ನಲ್ಲಿ ಈ ಕೊಂಡಿ ಕೊಟ್ಟಿದ್ರು ಅಂತ ಇಷ್ಟು ದಿನದ ಮೇಲೆ ಓದಿ ಪ್ರತಿಕ್ರಿಯೆ ಕೊಡದಿರಲಿಕ್ಕೆ ಆಗಲಿಲ್ಲ. ನೀವು ಈ ಲೇಖನ ಬರೆದ ನಂತರ ಇದುವರೆಗೆ ಬಹಳಷ್ಟು ಬೆಳವಣಿಗೆಗಳಾಗಿದೆ. ಪ್ರಸ್ತುತ ರಾಬರ್ಟ್ ವಾಧ್ರಾನನ್ನು ಖಾನ್‌ಗ್ರೆಸ್‌ನ ಭಟ್ಟಂಗಿಗಳು ಕರ್ನಾಟಕದಲ್ಲೇ ಚುನಾವಣೆಗೆ ಗೆಲ್ಲಿಸಿಬಿಟ್ಟರೂ ಆಶ್ಚರ್ಯವಿಲ್ಲ ಹಾಗಾಗಿ ಇದನ್ನು ಖಾನ್‌ಗ್ರೆಸ್‌ನವರ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಿ. ಕರ್ನಾಟಕದವನೇ ಅಲ್ಲದ ಒಬ್ಬ ವ್ಯಕ್ತಿಗೆ ಗೃಹಖಾತೆಯಂತಹಾ ಪ್ರಮುಖ ಖಾತೆ ಕೊಟ್ಟಿರುವಾಗ ಅದು ಸಾಧ್ಯವಾದರೂ ಆಶ್ಚರ್ಯವಿಲ್ಲ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

<span>%d</span> bloggers like this: