ಜನಗಣಮನ

07/12/2010

ಮತ್ತೆ ಮತ್ತೆ ‘ರಾಮ -ಕೃಷ್ಣರು’ ಹುಟ್ಟಿ ಬರುವುದಿಲ್ಲ…!

Filed under: ಜಾಗೃತಿ — ರಾಕೇಶ್ ಶೆಟ್ಟಿ @ 6:32 ಅಪರಾಹ್ನ

ಅವನ ದೂಷಿಸಿ, ಇವನ ದ್ವೇಷಿಸಿ ಇಲ್ಲಿ ಫಲವಿಲ್ಲ
ಎಲ್ಲರು ಎಲ್ಲರೂ ನರಿಗಳೇ
ಕನಸಿನ ಕಣಿವೆಯ ಕುರಿಗಳೇ

ಕನ್ನಡ ಚಿತ್ರವೊಂದರ ಈ ಹಾಡಿನ ಸಾಲುಗಳನ್ನ ಕರ್ನಾಟಕದ ಕೆಟ್ಟ ರಾಜಕಾರಣಕ್ಕೆ ಹೋಲಿಸಬಹುದಲ್ವಾ? ಈ ಪರಿಸ್ಥಿತಿಗೆ ದೂಷಿಸುವುದಾದರು ಯಾರನ್ನ? ಮತದಾರರನ್ನ ದೂಷಿಸೋಣವೆಂದರೆ ‘ಒಂದೇ ಒಂದ್ಸರಿ ನಮ್ಗೆ ಅಧಿಕಾರ ಕೊಡ್ರಪ್ಪ ನಾವ್ ಏನು ಅಂತ ತೋರಿಸ್ತಿವಿ’ ಅಂತಿದ್ದ  ಬಿ.ಜೆ.ಪಿಯನ್ನ ‘ಅದೇನ್ ಮಾಡ್ತಿರೋ ಮಾಡ್ ತೋರುಸ್ರಪ್ಪ’ ಅಂತ ಅಧಿಕಾರಕ್ಕೆ ತಂದು ಕೂರಿಸಿ ತಮ್ಮ ಕೆಲ್ಸನ ನೀಟಾಗಿ ಮತದಾರರು ಮಾಡಿ ಮುಗಿಸಿದರು (ಕೆಲವು ಸೀಟುಗಳು ಕಡಿಮೆಯಾಗಿದ್ದು ನಿಜ.ಆದ್ರೆ ಬುದ್ದಿವನ್ತರಾಗಿದ್ದವ್ರಿಗೆ ಅಷ್ಟು ಸೀಟುಗಳು ೫ ವರ್ಷದ ನಿರಾತಂಕದ ಆಡಳಿತಕ್ಕೆ ಸಾಕಿತ್ತು ಅನ್ನೋದು ಸುಳ್ಳಲ್ಲ).

ಮಾತು ಮಾತಿಗೆ ರಾಮ,ಧರ್ಮ,ನಮ್ಮ ಸಂಸ್ಕೃತಿ,ನಮ್ಮ ದೇಶ,ನಮ್ಮ ಮಣ್ಣು ಅನ್ನುತಿದ್ದ ಪಕ್ಷದ ಕೆಲವರ ‘ಮಣ್ಣಿನ ಮೇಲಿನ ಪ್ರೀತಿ’ ಈಗ ಅನಾವರಣವಾಗಿಯಾಗಿದೆ, ಹಾಗೆ ‘ಈ ಮೊದ್ಲು ಇದ್ದವರು ಹೇಸಿಗೆ ತಿಂದಿದ್ದಾರೆ ಹಾಗೆ ನಾನು ತಿಂದಿದ್ದೇನೆ’ ಅನ್ನೋ ಭಂಡ ಸಮರ್ಥನೆಗಳನ್ನು ಕೇಳಿದ ಮೇಲೆ ಕರ್ನಾಟಕದ ಬಹಳಷ್ಟು ಜನರಿಗೆ ಎಲ್ಲ ರಾಜಕೀಯ ಪಕ್ಷಗಳ ಮೇಲೆ ಅಸಹ್ಯವುಂಟಾಗಿದೆ.ರಾಜಕಾರಣಿಗಳೇನೋ ಮಾಡಿರೋ ತಪ್ಪನ್ನ ನಾಚಿಕೆ ಇಲ್ಲದೆ ಸಮರ್ಥಿಸಿಕೊಳ್ಳುತ್ತಿರೋದು ಅವರ ಜಾಯಮಾನ ಅಂದುಕೊಳ್ಳೋಣ.ಆದರೆ ನಮ್ಮಲ್ಲಿನ ಕೆಲ ಜನ ಸಹ ‘ಹೇ ಬಿಡ್ರಿ, ಮೊದಲಿನವ್ರಿಗೆ ಹೇಗೆ ಕದಿಬೇಕು ಅಂತ ಗೊತ್ತಿತ್ತು ಸೈಲೆಂಟ್ ಆಗಿ ಮಾಡ್ಕೊಂಡಿದ್ದಾರೆ,ಆದ್ರೆ ಇವರಿಗೆ ಅಧಿಕಾರ ಹೊಸದು ಪಾಪ ಗೊತ್ತಾಗಿಲ್ಲ ಸಿಕ್ಕ ಹಾಕ್ಕೊಂಡಿದ್ದಾರೆ’ ಅನ್ನೋ ಧಾಟಿಯಲ್ಲಿ ಮಾತಾಡುವುದ ಕೇಳಿದರೆ ಗಾಬರಿಯಾಗುತ್ತದೆ. ನರಿಗಳನ್ನ ವಹಿಸಿಕೊಳ್ಳುವ ಅಥವಾ ಅಂತವರೆಡೆಗೆ ನಿರ್ಲಿಪ್ತರಾಗುವ ಕುರಿಗಳ ಹಿಂಡೇ ಈ ದೇಶದಲ್ಲಿ ತುಂಬಿರುವುದೇ ಇಂದಿನ ದುಸ್ಥಿತಿಗೆ ಮೂಲ ಕಾರಣ.

ಕೊಳ್ಳೆ ಹೊಡೆಯುತ್ತಿರುವ ನರಿಗಳಿಗಿಂತ, ಈ ಅಮಾಯಕ ಕುರಿಗಳೇ ಅಪಾಯಕಾರಿಗಳು.ದೂರಬೇಕಾಗಿರುವುದು ಇಂತ ಕುರಿಗಳನ್ನೇ.ಒಂದೆಡೆ ನರಿಗಳು-ಕುರಿಗಳು ಮತ್ತೊಂದೆಡೆ ನರಿಗಳಿಗೆ ಸರಿ ಸಮಾನರಾಗಿ ಪೈಪೋಟಿ ನೀಡುವ ತೋಳಗಳಂತ ಮಾನವೀಯತೆ ಅಂದರೆ ಕೆಜಿಗೆಷ್ಟು ಅಂತ ಕೇಳುವ ಭ್ರಷ್ಟ ಅಧಿಕಾರಿಗಳು.ಒಮ್ಮೊಮ್ಮೆ ಈ ಕರ್ಮಕಾಂಡ ನೋಡಿ ಬೇಸತ್ತು ಈ ರಾಜಕಾರಣದ ತಿಪ್ಪೆ ಗುಂಡಿಯ ಬಳಿ ಸುಳಿಯುವುದೆ ಬೇಡ ಅನ್ನಿಸುತ್ತದ್ದಾದರೂ ಮತ್ತೊಮ್ಮೆ ಆ ತಿಪ್ಪೆ ಗುಂಡಿಯೊಂದಿಗೆ ಬಾಳಬೇಕಾದ ಕರ್ಮವ ನೆನೆಸಿಕೊಂಡು ಬರೆಯುವಂತಾಗುತ್ತದೆ.

ನರಿ-ತೋಳ-ಕುರಿ ಸಾಲೋದಿಲ್ಲ ಅಂತೇಳಿ ಕುರ್ಚಿ ಉಳಿಸಲು ‘ಕಾವಿ’ಗಳು ಅಖಾಡಕ್ಕಿಳಿದಿದ್ದಾಯಿತು ಅಲ್ಲಿಗೆ ‘ಭ್ರಷ್ಟ ರಾಜಕಾರಣ’ದ ಕೊಳ್ಳಕ್ಕೆ ‘ಜಾತಿಯ ಲೇಪ’ವು ಸೇರಿಕೊಂಡಿತು.ಯಾಕ್ರೀ ಸ್ವಾಮೀ ಬೆಂಬಲಿಸ್ತಿರಾ? ಅಂದ್ರೆ ‘ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಅಂತ ಭಗವದ್ಗೀತೆಲಿ ಹೇಳಿಲ್ವೆನ್ರಿ ಅದಿಕ್ಕ್ ಬಂದ್ವಿ ಅಂದ್ರು, ಇದನ್ನ ಕೇಳಿ ಆ ಕೃಷ್ಣನ ಪಿಳ್ಳಂಗೋವಿ ಕ್ಷಣ ಕೈ ಜಾರೀರಬಹುದು! ’ಸಂಭವಾಮಿ ಯುಗೇ ಯುಗೇ’ ಅನ್ನೋ ಈ ಸ್ವಾಮಿಗಳ ಕಣ್ಣಿಗೆ ಅನ್ಯಯದ ವಿರುದ್ಧ ಹೊರಾಡುತ್ತ ಇರೋ ಲೋಕಾಯುಕ್ತರು ಕಾಣುವುದಿಲ್ಲವೆನೋ?ಮಂತ್ರಿ ಮಂಡಲದ ಮಹಾಶಯ ಮುಖ್ಯಮಂತ್ರಿಗಳನ್ನ ಅಭಿನವ ಬಸವಣ್ಣ ಅಂದಿದ್ದು ಆಯಿತು!, ಪಾಪ ಬಸವಣ್ಣ ‘ನನ್ನ್ ಹೆಸ್ರೇಳಿ ರಾಜಕೀಯ ಮಾಡೋದು ಅಲ್ದೆ ಎಂತೆನ್ತವರ ಜೊತೆಗೆಲ್ಲ ಹೋಲಿಸ್ತೀರೋ’ ಅಂದ್ರೋ ಏನೋ ಈ ಗದ್ದಲದಲ್ಲಿ ಯಾರಿಗೂ ಕೇಳಿಸಲಿಲ್ಲ ನೋಡಿ :(,ಜಾತಿ ಪದ್ದತಿಯ ತೊಲಗಿಸಲೆಂದು ತಾನು ಆರಂಭಿಸಿದ ಕ್ರಾಂತಿ ಕಾರ್ಯವು ಮತ್ತೊಂದು ಜಾತಿಯಲ್ಲಿ ಅಂತ್ಯವಾಗುವ ಸತ್ಯ ಗೊತ್ತಿದ್ದರೆ ಬಸವಣ್ಣ ಸಹ ಆ ಕಾರ್ಯಕ್ಕೆ ಕೈ ಹಾಕುತ್ತಿರಲಿಲ್ಲವೆನೋ?

ಒಂದು ಕಾಲದಲ್ಲಿ ಒಳ್ಳೆಯ ಕಾರಣಗಳಿಗಾಗಿ ಹೆಸರು ಮಾಡಿದ್ದ ಕರ್ನಾಟಕದ ರಾಜಕೀಯ ಇಂದು ಕೆಟ್ಟ ಕಾರಣಗಳಿಗಾಗಿ ಹೆಸರು ಕೆಡಿಸಿಕೊಂಡಿದೆ.ತೀರ ಜಂಗಲ್ ರಾಜ್ ರೀತಿಯಲ್ಲಿ ಆರೋಪ ಮಾಡಿದವರ ಮನೆ ಮೆಲೆ ದಾಳಿ ಮಾಡುವಂತ ನೀಚತನದ ಮಟ್ಟಕ್ಕು ಇಳಿದು ಬಿಟ್ಟಿದೆ.

ಅನ್ಯಾಯವ ನೋಡಿಯು ಏನು ಮಾಡಲಾಗದ ಈ ಹತಾಶೆಯ ಅವಧಿಯಲ್ಲಿ ಬಹಳಷ್ಟು ಜನ ಹೇಳ್ತಾ ಇರೋದು ‘ಸಂಭವಾಮಿ ಯುಗೇ ಯುಗೇ’ ಅಂತಲೇ.

ಮಗದೊಮ್ಮೆ ನೀನು ಅವತಾರವೆತ್ತಿ  

ಧರೆಯ ದುಃಖ ನೀಗು

ನರನಾಗಿ ಬರದೆ ವನವಾಸ ಪಡದೆ

ಪರಶುರಾಮನಾಗು

ಶಿಕ್ಷಿಸೋ ರಕ್ಷಿಸೋ.. ಹೇ ರಾಮ್!

ಅಂತ ಹಾಡುತ್ತ ಕೂರೋಣ,ಹಾಗೆ ಒಂದು ವಿಶಯವನ್ನ ನೆನಪಿನಲ್ಲಿಟ್ಟುಕೊಳ್ಳೋಣ,ನರಿಗಳಿಗೆ ಭೋ-ಪರಾಕ್ ಹೇಳ್ತಾ ಇರೋ ಕುರಿ ಮಂದೆಯನ್ನ ಕಾಪಾಡಲು ಮತ್ತೆ ಮತ್ತೆ ‘ರಾಮ -ಕೃಷ್ಣರು’ ಹುಟ್ಟಿ ಬರುವುದಿಲ್ಲ.ಹಾಗೇನಾದರು ‘ಪ್ರಜಾಪ್ರಭುತ್ವ’ದಲ್ಲಿ ಬದಲಾವಣೆ ಬೇಕು ಅನ್ನುವುದಾದರೆ ‘ಪ್ರಜೆ’ಗಳು ಬದಲಾಗಬೇಕು. ಹಿಂದೆ ಓದಿದ ಒಂದು ಮಾತು ನೆನಪಾಗುತ್ತಿದೆ ’ಜಗತ್ತು ಕೆಟ್ಟವರ ಹಿಂಸೆಗೆ ನಲುಗುವುದಕ್ಕಿಂತ ಹೆಚ್ಚಾಗಿ,ಒಳ್ಳೆಯವರ ಮೌನದಿಂದ ನಲುಗುತ್ತಿದೆ’.

ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.

Advertisements

7 ಟಿಪ್ಪಣಿಗಳು »

 1. Itx true that voters need to think. But the people who are in politics focus on getting power rather developing a prospering republic. Moreover, there are very less people who think or have any hope that thru politics change can be made!

  Comment by Santhosh Acharya — 08/12/2010 @ 7:54 ಫೂರ್ವಾಹ್ನ | ಉತ್ತರ

 2. ಪ್ರಜೆಗಳು ಬದಲಾಗಬೇಕು ನಿಜ…
  ನಿಷ್ಠಾವಂತ ಪ್ರಜೆಯಾಗಿದ್ದು ಜನಮನ್ನಣೆ ಗಳಿಸಿದವನೂ, ರಾಜಕೀಯ ರಂಗಕ್ಕೆ ಧುಮುಕಿದ ಮೇಲೆ ಬದಲಾಗುತ್ತಿದ್ದಾನೆ…
  ಏನು ಮಾಡೋಣ…?

  Comment by ಆತ್ರಾಡಿ ಸುರೇಶ ಹೆಗ್ಡೆ — 09/12/2010 @ 8:22 ಫೂರ್ವಾಹ್ನ | ಉತ್ತರ

 3. ಇತ್ತೀಚಿನ ‘ಭಾನುವಾರದ ಭಾರತೀಯ’ದ (The Sunday Indian) ಒ೦ದು ಸ೦ಚಿಕೆಯಲ್ಲಿ ಬ೦ದ ಮುಖಪುಟ ಲೇಖನ ನೆನಪಾಯಿತು.. ”Which is the next Bihar?’ Karnataka or Maharashtra’.. ಕುರಿಗಳು ಜಾಸ್ತಿ ಆಗಿವೆಯೆನೊಪ ನಮ್ ರಾಜ್ಯದಲ್ಲಿ.. ಮು೦ದಿನ ಚುನಾವಣೆಯಲ್ಲಾದರು ನಾವೆಲ್ಲರು ಸ್ವಲ್ಪ ಜಾಣ ಕುರಿಗಳಾಗುತ್ತೇವೆ೦ದು ಆಶಿಸೋಣ!

  -ದರ್ಶನ್

  Comment by ದರ್ಶನ್ — 11/12/2010 @ 1:26 ಅಪರಾಹ್ನ | ಉತ್ತರ

  • ಜಾಣ ಕುರಿಗಳಾಗೋಕೆ ‘ಒಳ್ಳೆ ನರಿ’ ಬೇಕು ಅಲ್ವಾ ದರ್ಶನ್ ? 🙂
   ನಮ್ಮ ಕರ್ಮಕ್ಕೆ ಇರೋದೇ ಇದೆ ಮೂರು (ಬಿಟ್ಟ!) ಪಕ್ಷಗಳು ಈ ರಾಜ್ಯದಲ್ಲಿ ಇನ್ನೇನ್ ಮಾಡೋದು..!?

   Comment by ರಾಕೇಶ್ ಶೆಟ್ಟಿ — 11/12/2010 @ 5:56 ಅಪರಾಹ್ನ | ಉತ್ತರ

 4. hmm ಏನ್ಮಾಡೋದು , ಸರಿಪಡಿಸಲಿಕ್ಕೆ ಸಾಧ್ಯವಾಗದಷ್ಟು ಹಾಳಾಗಿ ಹೋಗಿದೆ ನಮ್ ದೇಶ…

  anyhow nice article…
  liked the sentence “ಜಾತಿ ಪದ್ದತಿಯ ತೊಲಗಿಸಲೆಂದು ತಾನು ಆರಂಭಿಸಿದ ಕ್ರಾಂತಿ ಕಾರ್ಯವು ಮತ್ತೊಂದು ಜಾತಿಯಲ್ಲಿ ಅಂತ್ಯವಾಗುವ ಸತ್ಯ ಗೊತ್ತಿದ್ದರೆ ಬಸವಣ್ಣ ಸಹ ಆ ಕಾರ್ಯಕ್ಕೆ ಕೈ ಹಾಕುತ್ತಿರಲಿಲ್ಲವೆನೋ?”

  Comment by shyamla — 01/07/2013 @ 2:25 ಅಪರಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

%d bloggers like this: