ಜನಗಣಮನ

19/12/2010

ಭಾರತಕ್ಕೆ ರಾಹುಲ್ ಡೇಂಜರ್!

Filed under: ಪ್ರಚಲಿತ,ರಾಜಕೀಯ — ರಾಕೇಶ್ ಶೆಟ್ಟಿ @ 6:25 ಅಪರಾಹ್ನ

’ಭಾರತಕ್ಕೆ ರಾಹುಲ್ ಡೇಂಜರ್!’ ಅನ್ನೋ ಹೇಳಿಕೆಯನ್ನ ಕೊಟ್ರೆ ಕಾಂಗ್ರೆಸ್ಸಿಗರು,ರಾಹುಲ್ ಅಭಿಮಾನಿಗಳಿಗೆ ನನ್ನ ಅಟ್ಟಾಡಿಸಿಕೊಂಡು ಹೊಡಿಬೇಕು ಅನ್ನಿಸೋದಿಲ್ವಾ? ಅವ್ರಿಗ್ ಯಾಕೆ ಬೇರೆಯವರಿಗೂ ಇದೆಂತ ಎಡಬಿಡಂಗಿ ಹೇಳಿಕೆ ಮಾರಾಯ? ಅಂತ ಅನ್ನಿಸ್ಬಹುದು.ಆದ್ರೆ,ಒಂದ್ನಿಮಿಷ ಕೆಳಗೆ ಓದಿಬಿಡೀಪ್ಪಾ 😉

ಜಗತ್ತಿನ ರಾಜತಾಂತ್ರಿಕರ ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಇಬ್ಬಗೆ ನೀತಿಯನ್ನ ಬಯಲು ಮಾಡುತ್ತ ಬಂದ ಜುಲಿಯನ್ ಅಸಾಂಜ್ನ ವಿಕಿಲೀಕ್ಸ್ ವರದಿಯಿಂದ ಈವರೆಗೂ ಭಾರತದಲ್ಲಿ ಅಂತ ಹಂಗಾಮವೇನು ಆಗಿರ್ಲಿಲ್ಲ,ಆದ್ರೆ ಮೊನ್ನೆ ಕಾಂಗ್ರೆಸ್ಸಿನ ಪ್ರಧಾನಿ ರಾಹುಲ್ ಗಾಂಧಿ (ಸದ್ಯ! ಭಾರತದ ಪ್ರಧಾನಿ ಅಲ್ಲ! 😉 ) “ಮುಸ್ಲಿಂ ಉಗ್ರ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾದಂಥ ಸಂಘಟನೆಗಳಿಗೆ ಭಾರತದ ಕೆಲ ಮುಸ್ಲಿಂ ಸಂಘಟನೆಗಳಿಂದ ಬೆಂಬಲವಿದೆ. ಆದರೆ, ಅವರಿಗಿಂತ ಹಿಂದೂ ಉಗ್ರವಾದಿಗಳಿಂದ ಹೆಚ್ಚು ಆತಂಕವನ್ನು ಭಾರತ ಎದುರಿಸುತ್ತಿದೆ” ಅಂತ ಅಮೆರಿಕಾದ ರಾಜತಾಂತ್ರಿಕನ ಜೊತೆ ಹೇಳ್ಕೊಂಡಿದ್ರು ಅನ್ನೋ ಕೇಬಲ್ ಬಿಡುಗಡೆ ಮಾಡಿದಾಗ ನಂಗೂ ಮೇಲೆ ಹೇಳಿದಂತೆ ಅನ್ನಿಸಿತ್ತು,ಕಾಮನ್ ಸೆನ್ಸ್ ಇರೋ ಭಾರತದ ಬಹುತೇಕರಿಗೆ ರಾಹುಲ್ನ ಹೇಳಿಕೆಯು ಎಡಬಿಡಂಗಿತನದ್ದು ಅನ್ನಿಸಿರಿಬಹ್ದು.

ಹೇಳಿಕೆ ವೀರ ರಾಹುಲ್ ಗಾಂಧಿಗೆ ನನ್ನ ಮೂರು ಬಹಿರಂಗ ಪ್ರಶ್ನೆಗಳು.

ಮೊದಲನೆ ಪ್ರಶ್ನೆ : ಈ ’ಹಿಂದೂ ಭಯೋತ್ಪಾದಾನೆ’ ಅನ್ನೋ coined word ಏನಾದ್ರು ಇದ್ರೆ ಅದು ಈ ದೇಶದ ಆಂತರಿಕ ಸಮಸ್ಯೆ ಅಷ್ಟೆ.ಅದನ್ನ ಅಮೇರಿಕಾದವನ ಬಳಿ ಹೇಳಿಕೊಂಡು ಅಳುವಂತದ್ದೆನಾಗಿತ್ತು ಮಿ.ರಾಹುಲ್?ಸಮಸ್ಯೆ ಪರಿಹರಿಸಲು ಅಧಿಕಾರದಲ್ಲಿರೊ ತಮ್ಮ ಪಕ್ಷಕ್ಕೆ ಸಾಧ್ಯವಾಗದೆ ಇದ್ರೆ ಕೆಳಗಿಳಿಯೋದ್ ತಾನೆ,ಅದು ಬಿಟ್ಟು ದೇಶದ ಆಂತರಿಕ ವಿಷಯಗಳನ್ನ ವಿದೇಶಿಯವರ ಬಳಿ ಹೇಳಿಕೊಂಡಿದ್ದು ಯಾಕೆ?ಈ ಬಗ್ಗೆ ದೇಶದ ಜನತೆಗೆ ಉತ್ತರ ಕೊಡಬಲ್ಲಿರಾ?ಮೊದ್ಲೆ ಭಾರತದ ಸರ್ಕಾರಗಳು ಕೈಲಾಗದವು ಅಂದುಕೊಳ್ಳೊ ಪಾಕಿಗಳಿಗೆ, ಅಲ್ಲಿನ ಉಗ್ರರಿಗೆ ಮತ್ತು ಇಲ್ಲಿದ್ದುಕೊಂಡು ಅವರಿಗೆ ಸಹಾಯ ಮಾಡ್ತಾ ಇರೋ ದೇಶ ದ್ರೋಹಿಗಳಿಗೆ ನಿಮ್ಮ ಎಡಬಿಡಂಗಿ ಹೇಳಿಕೆಯಿಂದ ಎಷ್ಟು ಖುಷಿ ಆಗಿರ್ಬಹುದು ಅಂತ ಯೊಚಿಸಿದ್ದೀರಾ?

ಎರಡನೆಯ ಪ್ರಶ್ನೆ : ಹೀಗೂ ಒಂದು ಭಯೊತ್ಪಾದನೆಯಿದೆ ಅಂತ ಕಂಡು ಹಿಡಿದಿದ್ದು ಕಳೆದ ಬಾರಿ ನಿಮ್ಮದೆ ಸರ್ಕಾರ ಅಧಿಕಾರದಲ್ಲಿದ್ದಾಗ ಅಲ್ವಾ?,ಆ ಆರೋಪವನ್ನ ಮೊದಲು ಸಾಬೀತುಪಡಿಸಿ.ಅಪರಾಧ ಮಾಡಿರೋದೆ ನಿಜ ಆಗಿದ್ರೆ ಗಲ್ಲಿಗಾದ್ರು ಏರಿಸಿ, ಸುಮ್ನ್ಯಾಕೆ ’ದಿಗ್ಗನೆ’ ಅರ್ಧ ನಿದ್ರೆಯಲ್ಲೆದ್ದವರಂತೆ ಅನವಶ್ಯಕವಾಗಿ ಹುತಾತ್ಮ ಕರ್ಕರೆ ಹೆಸರೇಳಿಕೊಂಡು ಕಿರಿಕಿರಿ ಮಾಡ್ತಿರಾ?

ಭಯೋತ್ಪಾದನೆ ವಿಷ್ಯದಲ್ಲಿ ಬೇರೆಯವ್ರ ಮೇಲೆ ಗೂಬೆಕೂರಿಸುವ ಮೊದಲು ’ಅಫ಼್ಜಲ್ ಗುರು’ ಅನ್ನೊ ಕ್ರಿಮಿಯನ್ನ ಇನ್ನು ಎಷ್ಟು ದಿನ ಸಾಕ್ಬೇಕು ಅಂತ ಇದ್ದೀರಾ ಹೇಳಿ?ಯುದ್ಧ ವಿಮಾನದಲ್ಲಿ ಕೂರೋದಿಕ್ಕೆ-ಸಭೆ ಸಮಾರಂಭಗಳಿಗೆ ಹೋಗೊಕೆ ಸಮಯದ ಅಭಾವವಿಲ್ಲದ ಪ್ರತಿಭಾ ಪಾಟೀಲ್ ಅನ್ನೊ ರಾಷ್ಟ್ರಪತಿಗೆ (ಮೊದಲ ಮಹಿಳೆ ಅಂದ್ರೆ ಸರಿನಾ!?), ಆ ಕ್ರಿಮಿಯ ಕ್ಷಮಾದಾನದ ಅರ್ಜಿಯನ್ನ ಕಸದ ಬುಟ್ಟಿಗೆಸೆಯಲು ಇನ್ನ ಎಷ್ಟು ದಿನ ಬೇಕು ಅಂತ ನೀವಾದ್ರು ಕೇಳಿ ಮಿ.ರಾಹುಲ್,ಇಲ್ಲ ನಿಮ್ಮ ಅಮ್ಮ ಸೋನಿಯಾ ಅವ್ರಿಗಾದ್ರು ಕೇಳೊಕ್ ಹೇಳಿ.ಆಗುತ್ತಾ?, ಅವನನ್ನ ಗಲ್ಲಿಗೇರಿಸಿದರೆ ’ಕಾನೂನು ಸುವ್ಯವಸ್ಠೆ ನೆಪ ಹೇಳಿ – ವೋಟ್ ಬ್ಯಾಂಕ್ ಜಪ’ ಮಾಡ್ತಾ ಇರೋದು ಯಾರಿಗು ಗೊತ್ತಾಗೋದಿಲ್ಲ ಅಂತ ನೀವಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ ಅಷ್ಟೆ! ಇನ್ನ ಕಸಬ್ ಅನ್ನೊ ಕ್ರಿಮಿಯ ಕೇಸ್ ಈಗ ಕೋರ್ಟ್ನಲ್ಲಿರುವುದರಿಂದ ಅದು ಮುಗಿಯುವವರೆಗೂ ಅವ್ನು ನಮ್ಮ ತೆರಿಗೆಯ ಹಣದಿಂದ ಬಿರಿಯಾನಿ ತಿನ್ಕೊಂಡು ಇರ್ತಾನೆ! ಅದಿಕ್ಕ್ ನಾನ್ ನಿಮ್ಮನ್ನ ದೂರೊದಿಲ್ಲ ಬಿಡಿ.ಅದು ಈ ದೇಶದ ನ್ಯಾಯ!

’ಕೇಸರಿ-ಹಸಿರು ಭಯೊತ್ಪಾದನೆ’ ಆಯಿತು, ಇನ್ನ ಸದ್ದಿಲ್ಲದೆ ಏನಾದ್ರು ’ಬಿಳಿ ಭಯೋತ್ಪಾದನೆ’ ಇದೆಯಾ? ಅಂತ ಭಯೋತ್ಪಾದನೆಗೆ ಬಣ್ಣ ಹಚ್ಚಿದ ನಿಮ್ಮ ಸರ್ಕಾರದ ಗೃಹ ಮಂತ್ರಿ ಚಿದಂಬರಂ ಅವ್ರಿಗೆ ಒಮ್ಮೆ ಕೇಳಿ ನೋಡ್ರಿ ಮಿ.ರಾಹುಲ್.

ಮೂರನೆಯ ಪ್ರಶ್ನೆ : ರೀ ರಾಹುಲ್ ತಮ್ಗೆ ಈ ದೇಶದ ಬಗ್ಗೆ ನಿಜವಾದ ಕಾಳಜಿ ಅನ್ನೋದೆನಾದ್ರು ಇದ್ರೆ, ’ಅಸಲಿಗೆ ಈ ’ಕೇಸರಿ ಭಯೋತ್ಪಾದನೆ’ ಅನ್ನೋದು (ಇರೋದೆ ನಿಜ ಆದ್ರೆ!) ಯಾಕೆ ಹುಟ್ಟಿಕೊಂಡಿತು ಅಂತ ನಿಮ್ಮ ವಂಧಿ-ಮಾದಿಗರಾದಂತ ದಿಗ್ವಿಜಯ ಅವರಂತವರ ಬಳಿ ಕೇಳದೆ,ತಾವೇ ಸ್ವಲ್ಪ ರಾಜಕೀಯ ಮುಕ್ತವಾಗಿ,ಪೂರ್ವಾಗ್ರಹ ಪೀಡಿತರಾಗದೆ,ನಿರ್ಮಲ ಮನಸ್ಸಿನಿಂದ ಒಮ್ಮೆ, ’ಸರ್ವೆ ಭವಂತು ಸುಖಿನಾ,ಸರ್ವೆ ಸಂತು ನಿರಾಮಯಾಃ’ ಅಂತ ಸರ್ವರ ಏಳಿಗೆ ಬಯಸುತಿದ್ದ ಸಮುದಾಯದ ’ಕೆಲವರು ದಾರಿ ತಪ್ಪಿ’ ರಕ್ತ ಪಾತಕ್ಕೆ ಕೈ ಹಾಕುವಂತೆ ಪ್ರೇರೆಪಿಸಿದ ಅಂಶಗಳಾದರು ಏನಿರಬಹುದು ಅಂತ ಯೋಚಿಸಬಲ್ಲಿರಾ?

ದೇಶದ ಮೇಲೆ ತಮ್ಗೆ ಇರೋ ಪ್ರೀತಿ,ಕಾಳಜಿಯನ್ನ ಸಿಕ್ಯುಲರ್ ರಾಜಕಾರಣದ ಹೆಸರಲ್ಲಿ, ಎಂಜಲು ಮತದ ಆಸೆಗೆ ಬಿದ್ದ ಲಾಲು,ಮುಲಾಯಮ್,ಪಾಸ್ವಾನ್ರಂತ ರಾಜಕಾರಣಿಗಳು ’ದೇಶ ದ್ರೋಹ’ದ ಆರೋಪದ ಮೇಲೆ ನಿಷೇಧಿಸಲ್ಪಟ್ಟಿರೋ ’ಸಿಮಿ’ ಯಂತ ಸಂಘಟನೆ ಮೇಲಿನ ನಿಷೇಧವನ್ನ ಹಿಂತೆಗೆದುಕೊಳ್ಳಿ ಅಂತ ಬಾಯಿ ಬಡಿದುಕೊಳ್ಳುವಾಗ ’ಹೇಳಿಕೆ’ ಕೊಡೊಕ್ ಏನಾಗಿತ್ತು?

ತಮಗೆ ಯೋಚಿಸೋಕ್ ಸಮಯವಿಲ್ಲ ಅನ್ನೋದಾದ್ರೆ ಈ ಸಮಸ್ಯೆಯನ್ನ ತೀರ ಸರಳವಾಗಿ ಹೇಳಿಬಿಡ್ತೆನೆ.’ಮನೆಯಲ್ಲಿ ತಪ್ಪು ಮಾಡುತ್ತಿರೋ ಮಗನನನ್ನ ಗದರದೆ, ತಪ್ಪನ್ನ ತೋರಿಸುತಿದ್ದ,ತಪ್ಪು ಮಾಡದಂತೆ ಗದರುತಿದ್ದ ಇನ್ನೊಬ್ಬ ಮಗನ ಮಾತಿಗು ಬೆಲೆ ಕೊಡದೆ ಅವನನ್ನ ಕಡೆಗಣಿಸಿ,ತಪ್ಪು ಮಾಡಿದ ಮಗನಿಗೆ ಅತಿಯಾಗಿ ಮುದ್ದು ಮಾಡಿ,ತಪ್ಪಿಗೂ ಗದರದೆ ’ಧೃತರಾಷ್ಟ್ರ ಪ್ರೇಮ’ ತೋರಿಸಿ ’ಮನೆ’ ಹಾಳಾದ್ರು ಪರ್ವಾಗಿಲ್ಲ ’ನೀನು ನನ್ನ್ ಮುದ್ದು ಪುಟ್ಟ ಕಣೋ’ ಅನ್ನೊ ರೀತಿ ವರ್ತಿಸುತ್ತಿರುವ ಸಿಕ್ಯುಲರ್ ರಾಜಕಾರಣವೆ ಇಂದು ಕೆಲಯುವಕರು ಹಾದಿ ತಪ್ಪಿ ಅಮಾಯಕರ ರಕ್ತ ಹರಿಸಲು ಮೂಲ ಪ್ರೇರಣೆ.ಅದನ್ನ ಮೊದಲು ಅರಿತುಕೊಳ್ಳಿ.

ಎಂಜಲು ವೋಟಿನ ಆಸೆಗೆ ಬಿದ್ದು ’ವೋಟ್ ಬ್ಯಾಂಕ್ ರಾಜಕಾರಣ’ ಮಾಡುವುದನ್ನ ನಿಲ್ಲಿಸಿ ಮನೆಯ ಮಕ್ಕಳೆಲ್ಲರನ್ನು ಪ್ರೀತಿಯಿಂದ ನೋಡುವುದನ್ನ ಕಲಿಯಿರಿ.ಅಧಿಕಾರದಲಿದ್ದುಕೊಂಡು ಸಮಸ್ಯೆಗಳಿಗೆ ಬೇರೊಬ್ಬರನ್ನ ದೂರುವ ಬದಲು ಸಮಸ್ಯೆ ಮೂಲ ತಿಳಿದುಕೊಂಡು ಚಿಕಿತ್ಸಕನಂತೆ ವರ್ತಿಸಿ.

ಹಾಂ! ಹಾಗೆ ಇನ್ನೊಂದು ಮಾತು ಕಣ್ರಿ ಇನ್ಮೆಲಾದ್ರು ದೇಶದ ಆಂತರಿಕ ಸಮಸ್ಯೆಗಳನ್ನ ವಿದೇಶಿಯರ ಜೊತೆ ಮಾತಾಡುವುದನ್ನ ನಿಲ್ಲಿಸಿಬಿಡಿ ಪ್ಲೀಸ್.

(ಚಿತ್ರ ಕೃಪೆ : http://www.venturebeat.com)

14 ಟಿಪ್ಪಣಿಗಳು »

 1. Well written. you have ended it with a good example. Any person who calls Hindus as terrorists should be treated as a traitor and driven out of the country.

  ಪ್ರತಿಕ್ರಿಯೆ by Girish — 20/12/2010 @ 3:15 ಫೂರ್ವಾಹ್ನ | ಉತ್ತರ

 2. ವಿದೇಶಿಯರು ವಿದೇಶಿಯವರ ಶೈಲಿಯಲ್ಲಿ ಮಾತನಾಡದೇ ಇನ್ನೇನು ಮಾಡಿಯಾರು ಹೇಳಿ, ರಾಕೇಶ್.
  ಈ ಸೋನಿಯಾ, ರಾಹುಲರೆಂಬ ನಕಲಿ ಗಾಂಧಿಗಳ ಬಂಡವಾಳ ಏನು, ಅವರ ಪೂರ್ವಾಪರ ಏನು ಅನ್ನುವುದರ ಬಗ್ಗೆ ಕೂಲಂಕಷ ತನಿಖೆ ನಡೆಸಿ, ಅರನನೆಲ್ಲಾ ಸಾರಾಸಗಟಾಗಿ ಇಟಲಿಗೆ ಅಟ್ಟಬೇಕು.
  ಆಗಷ್ಟೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆತೀತು.

  ಪ್ರತಿಕ್ರಿಯೆ by ಆತ್ರಾಡಿ ಸುರೇಶ ಹೆಗ್ಡೆ — 20/12/2010 @ 9:07 ಫೂರ್ವಾಹ್ನ | ಉತ್ತರ

  • Bad days ve been started for Bloody COnng…

   ಪ್ರತಿಕ್ರಿಯೆ by Manjunatha B R — 21/12/2010 @ 9:49 ಫೂರ್ವಾಹ್ನ | ಉತ್ತರ

  • ಕಾಂಗ್ರೆಸ್ಸ್ ಪಕ್ಷಕ್ಕೆ ಅವರು ಅನಿವಾರ್ಯ.ಪಕ್ಷದ ಅನಿವಾರ್ಯತೆಯನ್ನ ದೇಶದ ಮೇಲೆ ಹೇರಲು ಹೊರಟಿದ್ದಾರೆ.ಬೆಂಅಲಿಸುವ ಜನರು ಇದ್ದಾರೆ.ವಿರೊಧಿಸಲು ಸರಿಯಾದ ವಿರೋಧ ಪಕ್ಷವೆ ಇಲ್ಲದಿದ್ದಾಗ ಹೀಗೆ ಆಗುವುದು.

   ಪ್ರತಿಕ್ರಿಯೆ by ರಾಕೇಶ್ ಶೆಟ್ಟಿ — 21/12/2010 @ 5:16 ಅಪರಾಹ್ನ | ಉತ್ತರ

 3. ರಾಕೇಶ್ ಇಲ್ಲಿ ನೋಡಿ. ಸೋನಿಯಾ ಮತ್ತೆ ರಾವುಲ್ ನಮ್ಮ ದೇಶದ ಪ್ರಜೆಗಳೇ ಅಲ್ಲ.
  ಇವರು ಕಟ್ಟಾ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ….
  ಇವರ ಬಗ್ಗೆ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿದ ವೀಡಿಯೊ ನೋಡಿ.
  1. http://www.youtube.com/watch?v=84fkL6yB1X8
  2. http://www.youtube.com/watch?v=WYwQkhWMXIQ&feature=related
  3. http://www.youtube.com/watch?v=gMQ6ba8TXH8&feature=related

  ಪ್ರತಿಕ್ರಿಯೆ by girish — 20/12/2010 @ 11:22 ಫೂರ್ವಾಹ್ನ | ಉತ್ತರ

 4. ಸುರೇಶ್ ಸರ್ ನೀವು ಹೇಳಿದ್ದು correct. but ನಮ್ಮ ದೇಶದ ಮಟ್ಟಿಗೆ ಅಸಾಧ್ಯ. ಮೊದಲು ನಾವು ಎಚ್ಚೇತ್ತುಕೋಳ್ಳಬೇಕು. ರಾಕೇಶ್ ಸರ್ ಉತ್ತಮ ಲೇಖನ ಪ್ರಕಟಿಸಿದ್ದೀರಿ ಧನ್ಯವಾದಗಳು…

  ಪ್ರತಿಕ್ರಿಯೆ by KannadaBlogList — 21/12/2010 @ 1:17 ಅಪರಾಹ್ನ | ಉತ್ತರ

 5. What I think is,.. Rahul wanted to say ” its easy for us to tackle SIMI and other pro islamic terros groups. but what the govt can do if Hindus start terrorism like RSS. As hindu’s are majority in this country…,This was his concern . I guess.

  ಪ್ರತಿಕ್ರಿಯೆ by Indian — 21/12/2010 @ 5:15 ಅಪರಾಹ್ನ | ಉತ್ತರ

  • ಇಲ್ಲ ಸರ್.. ಆ ರೀತಿ guess ಮಾಡೋಕೆ chance e ಇಲ್ಲ.. if you read the exact lines without any bias it just says one thing – ‘ರಾಹುಲ್ PM ಆಗೊಕೆ unfit’ ಅ೦ತ.

   -ದರ್ಶನ್

   ಪ್ರತಿಕ್ರಿಯೆ by ದರ್ಶನ್ — 25/12/2010 @ 6:40 ಅಪರಾಹ್ನ | ಉತ್ತರ

   • ದಕ್ಷಿಣ ಭಾರತದಲ್ಲಿ ಈ ರಾಹುಲನ ಸೀರಿಯಲ್ಸ್ ಬರ್ತ ಇಲ್ಲ, ಆದ್ರೆ ಹಿಂದಿ-ಇಂಗ್ಲೀಶ್ ಮಾಧ್ಯಮಗಳಲ್ಲಿ ಬರ್ತಾ ಇರೋ ಸುದ್ದಿಗಳು ಅವ್ರು ಇವ್ನಿಗೆ ಕೊಡೊ ಕವರೆಜ್ ನೋಡಿದ್ರೆ ಉತ್ತರ ಭಾರತದ ಹಾಗೆ ಇಂತ ಚಾನೆಲ್ಗಳನ್ನ ನೋಡೊ ಜನಕ್ಕೆ ಇವ್ನು ಮಹಾನ್ ನಾಯಕ ಅನ್ನೊ ಭ್ರಮೆ ಬಂದು ಬಿಡುವಂತೆ ಮಾಡೋದು ಸುಳ್ಳಲ್ಲ ದರ್ಶನ್

    ಪ್ರತಿಕ್ರಿಯೆ by ರಾಕೇಶ್ ಶೆಟ್ಟಿ — 27/12/2010 @ 5:00 ಅಪರಾಹ್ನ | ಉತ್ತರ

 6. ನಮ್ಮ ಭಾರತದ್ದು ಸದ್ಯದ ದೊಡ್ಡ ಸಮಸ್ಯೆ ಎ೦ದರೆ ಮಾಧ್ಯಮ. ನ್ಯೂಸ್ ಗಳನ್ನು ತಿರುಚಿ, ತಿರುಚಿ “ಜನ ಸಾಮಾನ್ಯ”ರನ್ನು ನ೦ಬಿಸುವ ಕತೆ ಕಟ್ಟುತ್ತಾ ಅರುವತ್ತು ವರ್ಷ ದೂಡಿದ್ದಾರೆ. ಭಾರತವನ್ನು ಬಡತನ,ಭ್ರಷ್ಟಾಚಾರದ ಮೂಲೆಗೆ ದೂಡಿದ್ದಾರೆ. ವಿಕಿ ಲೀಕ್ಸ್ ನ ಜುಲಿಯನ್ ಧೈರ್ಯಕ್ಕೆ ಸಲಾಮು ಹೊಡಿಬೇಕು. ಭಾರತದಲ್ಲಿ ಇ೦ತಹವರು ಹುಟ್ಟಿ ಬರ್ಲಿ. ಬರ್ಕಾತ್ ಆಗದವರು(ಬರ್ಖಾ ದತ್) ಬೇಡ 🙂

  ಪ್ರತಿಕ್ರಿಯೆ by Pramod — 04/01/2011 @ 4:03 ಅಪರಾಹ್ನ | ಉತ್ತರ

  • ಇಲ್ಲಿ ಬರ್ಖತ್ ಆಗುವವರು Hypocrite ಜನಗಳೆ ಪ್ರಮೋದ್.ಸುಳ್ಳು ಹೇಳೊವ್ರು ಅದ್ಯಾವ ಪರಿ ನಮ್ಮ ಸಮಾಜವನ್ನ ಆವರಿಸಿಕೊಂಡಿದ್ದಾರೆ ಅಂದರೆ, ನಿಜ ಹೇಳೊರನ್ನೆ ಜನ ನಂಬಲಾಗದಷ್ಟು!
   ನೋಡೋಣ ಎಲ್ಲದಕ್ಕೊ ಒಂದು ಅಂತ್ಯ ಅಂತ ಇದ್ದೆ ಇರುತ್ತದೆ.

   ಪ್ರತಿಕ್ರಿಯೆ by ರಾಕೇಶ್ ಶೆಟ್ಟಿ — 04/01/2011 @ 10:07 ಅಪರಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

%d bloggers like this: