ಇದು ಕನ್ನಡಕ್ಕಾದ ಅವಮಾನವಲ್ಲವೇ?

ಕರ್ನಾಟಕದಲ್ಲಿ ಕನ್ನಡದ ಪರ ಕೆಲಸ ಮಾಡಿದವರಿಗೆ ಗೌರವ ಕೊಡೋದು ತಪ್ಪಾ? ತಪ್ಪು ಅನ್ನೋದಾದ್ರೆ ರಾಜ್ಯಪಾಲರು, ಡಾ|| ಎಂ. ಚಿದಾನಂದಮೂರ್ತಿ  ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನಿರಾಕರಿಸಿರುವುದು ಸರಿಯಾಗುತ್ತದೆ,ಅಲ್ವಾ? ಚಿಮೂ ಯಾರು? ಕನ್ನಡಕ್ಕೆ ಅವರ ಕೊಡುಗೆಯೇನು? ಎಲ್ಲ ಅರ್ಹತೆಯಿದ್ದರು ಅವರಿಗೆ ಗೌರವ ಡಾಕ್ಟರೇಟ್  ನಿರಾಕರಿಸಲು ನೀಡಿರುವ ಕಾರಣವಾದರು ಏನು ಅಂತ ನೋಡಿದರೆ ‘ಸಂಘ ಪರಿವಾರದ’ ಜೊತೆ ಅವರು ಗುರ್ತಿಸಿಕೊಂಡಿರುವ ಮಹಾಪರಾಧವನ್ನ ಮಾಡಿರುವುದಂತೆ!

ಅದ್ಯಾವ ಸೀಮೆಯ ಅಪರಾಧ ಅಂತ ನನಗೂ ಇನ್ನು ಕೆಲವರಿಗೂ ಅನ್ನಿಸಬಹುದು ಆದರೆ ಸಿಕ್ಯುಲರ್ ಮನಸ್ಸುಗಳಿಗೆ ಅದು ದೇಶ ದ್ರೋಹಕ್ಕೆ ಸಮ ಅನ್ನಿಸಲೂಬಹುದು.ಆದರೆ ಚಿಮೂ ಅವರನ್ನ ಕೇಸರಿ-ಹಸಿರಿನ ಪರದೆ ಸರಿಸಿ, ಕೆಂಪು-ಹಳದಿಯ ಕನ್ನಡದ ಪರದೆಯ ಮೂಲಕ ನೋಡಿದಾಗಲೂ ಅವರ ವಿರೋಧಿಗಳು ಅವರಿಗೆ ಗೌರವ ಡಾಕ್ಟರೇಟ್ ನೀಡುವುದನ್ನು ವಿರೋಧಿಸಬಲ್ಲರೆ?

ಯಾವುದೇ ರಾಜಕೀಯ ಪಕ್ಷ,ಸಂಘಟನೆ, ಪಂಥಕ್ಕೆ ಸೇರದ ಒಬ್ಬ ಸಾಮನ್ಯ ಕನ್ನಡಿಗನ ಕಣ್ಣಿಗೆ ಚಿಮೂ ಅವರು,ಕನ್ನಡದ ಪ್ರಖ್ಯಾತ ಸಂಶೋಧಕ,ವಿದ್ವಾಂಸ,ಇತಿಹಾಸಜ್ಞ ಹಾಗೂ ಲೇಖಕರಾಗಿ ಮಾತ್ರ ಕಾಣಬಲ್ಲರು.

ಇಂತ ಚಿಮೂ ಅವರಿಗೆ ಗೌರವ ಡಾಕ್ಟರೇಟ್ ನಿರಾಕರಿಸುವುದು ಕನ್ನಡ ಭಾಷೆಯ ಪ್ರಾಚೀನತೆ ಹಾಗೂ ಪ್ರಾಚೀನ ಕರ್ನಾಟಕದ ಬಗ್ಗೆ ಅವರ ಒಲವನ್ನ,ನಿಷ್ಠೆಯನ್ನ,ತುಡಿತವನ್ನ ಮತ್ತು ಕನ್ನಡಕ್ಕಾಗಿ ಅವರು ಮಾಡಿರುವ ಕೆಲಸವನ್ನ ಕಡೆಗಣಿಸಿದಂತೆ ಅವಮಾನಿಸಿದಂತಲ್ಲವೇ? ಕನ್ನಡಕ್ಕಾಗಿ ಕೆಲಸ ಮಾಡಿದವರನ್ನ ಕಡೆಗಣಿಸುವುದು ಕನ್ನಡಿಗರನ್ನ,ಕರ್ನಾಟಕವನ್ನ ಕಡೆಗಣಿಸಿದಂತೆ-ಅವಮಾನಿಸಿದಂತೆಯೇ ಸರಿ.

ವಿಕಿಯಲ್ಲಿರುವ, ಚಿಮೂ ಕನ್ನಡಕ್ಕೆ ಕೊಟ್ಟಿರೋ ಬರಹಗಳ ಪಟ್ಟಿ ಹೀಗಿದೆ.

ವೀರಶೈವ  ಧರ್ಮ, ವಾಗರ್ಥ ಬಪ್ಕೋ,ವಚನ ಸಾಹಿತ್ಯ,Sweetness and light Sahithigala Kalavidara Balaga,ಸಂಶೋಧನೆ.ಸಂಶೋಧನಾ ತರಂಗ ಸರಸ ಸಾಹಿತ್ಯ ಪ್ರಕಾಶನ,ಪುರಾಣ ಸೂರ್ಯಗ್ರಹಣ ಆಇಬಿಎಕ್ ಪ್ರಕಾಶನ,ಪಾಂಡಿತ್ಯ ರಸ,ಕನ್ನಡ ವಿಶ್ವವಿದ್ಯಾಲಯ,ಸೂನ್ಯ ಸಂಪಾದನೆಯನ್ನು ಕುರಿತು.ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪ್ರಸ್ಯತೆ ಪ್ರಸರಾಂಗ,ಲಿಂಗಾಯತ ಅಧ್ಯಯನಗಳು ವಾಗ್ದೇವಿ ಪುಸ್ತಕಗಳು, ಕವಿರಾಜಮಾರ್ಗ.ಕರ್ನಾಟಕ ಸಂಸ್ಕ್ರತಿ ಕನ್ನಡ ಸಾಹಿತ್ಯ ಪರಿಷತ್ತು,ಕರ್ನಾಟಕ-ನೇಪಾಳ ಪ್ರಸಾರಾಂಗ,ಕನ್ನಡಾಯಣ,ಕನ್ನಡ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ.ಚಿದಾನಂದ ಸಮಗ್ರ ಸಂಪುಟ,ಬಸವಣ್ಣ.

ಕನ್ನಡಿಗರೇ ಮರೆತು ಕುಳಿತಿರೋ ವೀರ ಕನ್ನಡತಿಯರಾದ ಬೆಳವಡಿ ಮಲ್ಲಮ್ಮ, ಉಲ್ಲಾಳದ ರಾಣಿ ಅಬ್ಬಕ್ಕರನ್ನ ಆಗಾಗ ನೆನಪಿಸುವುದು ಚಿಮೂ ಅವರೇ.ರಾಜಕೀಯದ ಫಲವಾಗಿ ಕೇವಲ ತಮಿಳಿಗೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿ, ಕನ್ನಡಕ್ಕೆ ಸಿಗದಂತೆ ಮಸಲತ್ತು ಮಾಡಿದಾಗ.ಕನ್ನಡದ ಪ್ರಾಚೀನತೆಯನ್ನ ಸಾಕ್ಷಿ ಪುರಾವೆ ಸಮೇತ ನೀಡಿದ್ದು ಯಾರು ಮಿ.ಹಂಸರಾಜ್ ಭಾರದ್ವಾಜ್?, ಇಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ದೊರೆಯುವಲ್ಲಿ ಚಿಮೂ ಅವರ ಕೊಡುಗೆಯನ್ನು ನೀವು ನಿರಾಕರಿಸಬಲ್ಲಿರಾ? ಹಣದಾಸೆಗೆ ಬಿದ್ದ ಸ್ಥಳೀಯ ಪುಂಡ ಪೋಕರಿಗಳ,ವಿದೇಶಿ ಪ್ರವಾಸಿಗರ ಅನೈತಿಕ ಚಟುವಟಿಕೆಗಳ ತಾಣವಾಗಿ ಕನ್ನಡದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ನಗರಿ ಹಂಪಿ ಮಾರ್ಪಾಡಾಗುವ ವಿಷಮ ಕಾಲದಲ್ಲಿ ಹಂಪಿ ಉಳಿಸಲು ಅವರು ಚಳುವಳಿ ಮಾಡಿದ  ತಪ್ಪಾ? ಒಬ್ಬ ಸಂಶೋಧಕನಾಗಿ ಹಂಪಿಯನ್ನು ನೋಡಿದ ಚಿಮೂ ಅವರಿಗೆ ಸಹಜವಾಗಿ ಅಲ್ಲಿನ ಸ್ಮಾರಕಗಳ ಮೇಲೆ ನಡೆದಿರುವ ದಾಳಿಯ ಸ್ವರೂಪ ಮತ್ತು ಹಾಗೆ ಮಾಡಿದವರ ಬಗ್ಗೆ ಮಾತನಾಡುವುದು ತಪ್ಪಾ? ಒಂದು ವೇಳೆ ಚಿಮೂ ಸಿಕ್ಯುಲರ್ ಆಗಿದ್ರೆ  ಇದು ಸಿಕ್ತ ಇತ್ತೋ ಏನೋ, ಆದ್ರೆ ಅವ್ರು ಹೇಳಬಾರದ ಸತ್ಯಗಳನ್ನೆಲ್ಲ ಸಂಶೋಧನೆಯ ನೆಪದಲ್ಲಿ ಹೇಳಿದ್ದೆ ತಪ್ಪಾ?

ಇತ್ತೀಚಿಗೆ ಅವರು ಮತಾಂತರ ನಿಷೇಧಿಸಿ ಅಂತಲೋ ಅಥವಾ ಇನ್ಯಾವುದೇ ಕಾರಣಗಳಿಗಾಗಿ ಅವರು ಬಲಪಂಥಿಯರು-ಸಂಘ ಪರಿವಾರದ ನಿಕಟವರ್ತಿ ಅನ್ನಿಸಿರಬಹುದು.ಆದರೆ ಇದು ಅವರ ಕನ್ನಡ ಪರ ಕೆಲಸವನ್ನ ಮಬ್ಬಾಗಿಸುತ್ತದೆಯೇ? ಸಾಂವಿಧಾನಿಕ ಹುದ್ದೆಯಲ್ಲಿ ಕೂತು ತಾನೊಬ್ಬ ಕಾಂಗ್ರೆಸ್ಸಿಗ ಅಂತ ಹೇಳಿಕೊಳ್ಳುವ ಹೆಮ್ಮೆ ಭಾರಧ್ವಜರಿಗೆ ಇರುವಂತೆಯೇ,ಈ ದೇಶದ ಪ್ರಜೆಯಾಗಿ ಚಿಮೂ ಅವರಿಗೂ ಅವರದೇ ಆದ ನಿಳುವುಗಳಿರುತ್ತವೆ.ಅದನ್ನೇ ನೆಪ ಮಾಡಿ ಈ ಮಟ್ಟಕ್ಕಿಳಿಯುವುದು ಎಷ್ಟು ಸರಿ? ಎಲ್ಲರೂ ನಿಮ್ಮ ತರವೇ ಇರಬೇಕೆಂದು ಏಕೆ ಅಂದುಕೊಳ್ಳುತ್ತಿರಿ?

ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂಧರ್ಭದಲ್ಲಿ ಕನ್ನಡದ ಹಿರಿಯ ವಿದ್ವಾಂಸರಿಗೆ ಗೌರವ ಡಾಕ್ಟರೇಟ್ ನಿರಾಕರಣೆ ಅನ್ನುವುದು ಬಹುಷಃ ಕನ್ನಡಪರ ಕೆಲಸ ಮಾಡುವವರಿಗೆ,ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಅವಮಾನವದಂತಲ್ಲವೇ?

ಈ ಬಗ್ಗೆ ಚರ್ಚೆಯಾಗಬಲ್ಲದೆ?

ಚಿತ್ರಕೃಪೆ: thatskannada.oneindia.in

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: