ಮೂಲತಹ ಚೆಲುವ ಕನ್ನಡ ನಾಡಿನ ಕರಾವಳಿಯ ಹುಡುಗ , ಹುಟ್ಟಿದ್ದು, ಬೆಳೆದಿದ್ದು,ಓದಿದ್ದು ಎಲ್ಲಾ ಶಿಲ್ಪ ಕಲೆಗಳ ತವರಲ್ಲಿ. ಈಗ ಇರುವುದು ‘ಉದ್ಯಾನ ನಗರಿ’ಯಲ್ಲಿ. ಉನ್ನತ ವಿದ್ಯಾಭ್ಯಾಸದಲ್ಲಿ ಕಲಿತಿದ್ದಿದ್ದು ‘ಯಂತ್ರ’ಗಳ ಬಗ್ಗೆ ,ಮಾಡುತ್ತಿರುವದು ಕಲಿತದ್ದಕ್ಕೆ ಸಂಬಂಧವೆ ಇಲ್ಲದ ಕೆಲಸ. ಓದು,ಬರಹ ,ಹಾಡು ,ಹರಟೆ, ಚಾರಣ, ಸಂಗೀತ, ಕ್ರೀಡೆ ಇಷ್ಟ 🙂
ಮಾಡ್ತಾ ಇರೋ ಕೆಲಸ ಬಿಟ್ಟು ಬೇರೆ ವಿಷಯಗಳಲ್ಲೇ ಹೆಚ್ಚು ಆಸಕ್ತಿ 🙂
‘ಜನ ಗಣ ಮನ’ ಅಂದ್ರೆ ‘ಗಣ’ ತಂತ್ರ ರಾಷ್ಟ್ರದ ‘ಜನ’ ಸಾಮನ್ಯನ ‘ಮನ’ದ ಮಾತು
ಪ್ರಿಯರಾದ ಶ್ರೀ ರಾಕೇಶ್ ಶೆಟ್ಟಿ ಅವರಿಗೆ—
ಈ ದಿನ ಜಾಲ ತಾಣಗಳಲ್ಲಿ ಓಡಾಡುತ್ತಿದ್ದಾಗ ನಿಮ್ಮ ಆಕರ್ಷಕ ಫೋಟೋ ಇರುವ ತಮ್ಮ ಸ್ವಂತ ಬ್ಲಾಗ್ ಜನಗಣಮನ ಕಾಣಿಸಿತು. ನಿಮ್ಮ ಪರಿಚಯದ ಮೂರ್ನಾಲಕ್ಕು ಸಾಲುಗಳು ಆಪ್ತವಾಗಿದೆ ಮತ್ತು ನನ್ನನ್ನು ಸೆರೆ ಹಿಡಿದವು. ತಾವು ಜನಗಣಮನ ದಲ್ಲಿ ಫೆಬ್ರವರಿ ೨೦೧೧ರ ಏಕೆ ಏನೂ ಬರೆದಿಲ್ಲ? ಬಹುಶಃ “ನಿಲುಮೆ”ಯಲ್ಲಿ ತಾವು ತುಂಬಾ busy ಆಗಿದ್ದೀರಿ ಎಂದು ಭಾವಿಸುತ್ತೇನೆ. ನಿಮ್ಮನ್ನು ಭೇಟಿಯಾಗಬೇಕು ಅನಿಸುತ್ತಿದೆ.
ನಿಮ್ಮವ
ಮು ಅ ಶ್ರೀರಂಗ ಬೆಂಗಳೂರು ೩೦ ಜನವರಿ ೨೦೧೪
ಸರ್,
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯೋಸ್ಮಿ.
ಜನಗಣಮನ ನಿಂತಿಲ್ಲ… ನಿಲುಮೆಯಲ್ಲಿ ನಿರಂತರವಾಗಿದೆ.ನಿಲುಮೆ ಶುರುಮಾಡಿದ ಮೇಲೆ ಅಲ್ಲೇ ಬರೆಯಲು ಶುರುಮಾಡಿದೆ.ಹಾಗಾಗಿ ಇದು ನಿಂತಿದೆ 🙂
ಖಂಡಿತ, ನಿಮ್ಮನ್ನು ಭೇಟಿಯಾಗುವ ಮನಸಿದೆ.ಇಷ್ಟರಲ್ಲೇ ಒಮ್ಮೆ ಸಿಗೋಣ